Thursday, January 15, 2026
Menu

ಪಾಕ್‌, ಬಾಂಗ್ಲಾ ಸೇರಿ 75 ದೇಶಗಳ ವಲಸಿಗರಿಗೆ ಅಮೆರಿಕ ವೀಸಾ ನಿರ್ಬಂಧ

ವಿದೇಶೀಯರ ನಿರ್ಬಂಧ ನೀತಿಯನುಸಾರ ಅಮೆರಿಕ ಸರ್ಕಾರ ಕೆಲವು ದೇಶಗಳ ನಿವಾಸಿಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ತಡೆ ಹಿಡಿಯಲಾಗಿದೆ. ಈ 75 ದೇಶಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಕೂಡ ಸೇರಿವೆ.

ಅಮೆರಿಕದಲ್ಲಿರು ಉತ್ತಮ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆದು ವಲಸಿಗರು ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಡೊನಾಲ್ಡ್‌  ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ 75 ದೇಶಗಳ ಜನರ ವಲಸೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಡಳಿತ ತಿಳಿಸಿದೆ.

ಈ ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರ ಅನ್ವಯ ಆಗುವುದು. ಇಮಿಗ್ರೇಶನ್ ವೀಸಾ ಅರ್ಜಿ ಸಲ್ಲಿಸಿರುವವರಲ್ಲಿ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದ್ದು ಪ್ರವಾಸ, ಬ್ಯುಸಿನೆಸ್ ಇತ್ಯಾದಿಗಳಿಗೆ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ಸಿಗುವುದು.

ಅಫ್ಗಾನಿಸ್ತಾನ, ಆಲ್ಬೇನಿಯಾ, ಆಲ್ಜೀರಿಯಾ, ಆಂಟಿಗುವಾ ಬರ್ಬುಡಾ, ಆರ್ಮೇನಿಯಾ, ಅಜರ್ಬೈಜಾನ್, ಬಹಾಮಸ್, ಬಾಂಗ್ಲಾದೇಶ, ಬಾರ್ಬಡಾಸ್, ಬೆಲಾರಸ್, ಬೆಲಿಜೆ, ಭೂತಾನ್, ಬೋಸ್ನಿಯಾ ಹರ್ಜೆಗೋವಿನಾ, ಬ್ರೆಜಿಲ್, ಕಾಂಬೋಡಿಯಾ, ಕ್ಯಾಮರೂನ್, ಕೇಪ್ ವೆರ್ಡೆ, ಕೊಲಂಬಿಯಾ, ಕೋಟೆ ಡೀ ಐವೋರೆ , ಕ್ಯೂಬಾ, ಕಾಂಗೊ ಡೆಮಾಕ್ರಟಿಕ್ ರಿಪಬ್ಲಿಕ್, ಡಾಮಿನಿಕಾ, ಈಜಿಪ್ಟ್, ಎರಿಟ್ರಿಯಾ, ಇಥಿಯೋಪಿಯಾ, ಫಿಜಿ, ಗಾಂಬಿಯಾ, ಜಾರ್ಜಿಯಾ, ಘಾನಾ, ಗ್ರೆನಾಡಾ, ಗಾಟಿಮಾಲ, ಗಿನಿಯಾ, ಹೈಟಿ, ಇರಾನ್, ಇರಾಕ್, ಜಮೈಕಾ, ಜೋರ್ಡಾನ್‌, ಕಜಕಸ್ತಾನ್, ಕೊಸೋವೋ, ಕುವೈತ್‌, ಕಿರ್ಗಿಸ್ತಾನ್, ಲಾವೋಸ್‌, ಲೆಬನಾನ್, ಲೈಬೀರಿಯಾ, ಲಿಬಿಯಾ, ನಾರ್ತ್ ಮೆಸಿಡೋನಿಯಾ, ಮಾಲ್ಡೋವಾ, ಮಂಗೋಲಿಯಾ, ಮಾಂಟೆ ನೀಗ್ರೋ, ಮೊರಾಕ್ಕೋ, ಮಯನ್ಮಾರ್, ನೇಪಾಳ, ನಿಕಾರಾಗುವಾ, ನೈಜೀರಿಯಾ, ಪಾಕಿಸ್ತಾನ್, ಕಾಂಗೋ ರಿಪಬ್ಲಿಕ್, ರಷ್ಯಾ, ರುವಾಂಡ, ಸೇಂಟ್ ಕಿಟ್ಸ್ ಅಂಡ್ ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡಿನ್ಸ್, ಸೆನೆಗಲ್, ಸಿಯೆರಾ ಲಿಯೋನೆ, ಸೊಮಾಲಿಯಾ, ಸೌತ್ ಸುಡಾನ್, ಸುಡಾನ್, ಸಿರಿಯಾ, ತಾಂಜಾನಿಯಾ, ಥಾಯ್ಲೆಂಡ್, ಟೋಗೋ, ಟುನಿಶಿಯಾ, ಉಗಾಂಡ, ಉರುಗ್ವೆ, ಉಜ್ಬೆಕಿಸ್ತಾನ್, ಯೆಮೆನ್ ದೇಶಗಳ ವಲಸಿಗರಿಗೆ ವೀಸಾ ನೀಡಿಕೆ ಸ್ಥಗಿತ ಗೊಂಡಿದೆ.

Related Posts

Leave a Reply

Your email address will not be published. Required fields are marked *