ಮೈಸೂರಿನ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ತಾನು ಕರೆದಾಗ ಬರಲಿಲ್ಲವೆಂದು ಚಿಕ್ಕಪ್ಪನೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ.
ಚಿಕ್ಕಪ್ಪ ಆನಂದ್ ಎಂಬಾತ ಮಗುವಿಗೆ ದೊಣ್ಣೆಯಿಂದ ಹೊಡೆದು ಎರಡು ಕೈಮುರಿದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಿಕ್ಕಪ್ಪ ನಿಂದ ಹಲ್ನಲೆಗೆ ಒಳಗಾದ ಮಗು ಜಾನ್ವಿ ಮನೆಯಲ್ಲಿ ಆಟವಾಡುತ್ತಿದ್ದಳು. ಆಟೋ ಓಡಿಸುತ್ತಿದ್ದ ಆನಂದ್ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ವಿಯನ್ನು ಕರೆದಿದ್ದಾನೆ. ಆಕೆ ಆನಂದ್ ಜೊತೆ ಹೋಗಲು ನಿರಾಕರಿಸಿದ್ದಾಳೆ.
ಆತ ಜಾನ್ವಿಯನ್ನ ಬಲವಂತವಾಗಿ ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಥಳಿಸಿದ್ದು, ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಆನಂದ್‌ನನ್ನು ಬಂಧಿಸಿದ್ದಾರೆ.