ಹುಡುಗರ ಸ್ಟೈಲ್ನಲ್ಲೇ ಶರ್ಟ್, ಪ್ಯಾಂಟ್ ಧರಿಸಿ ಹಗಲು ವೇಳೆಯೇ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಯುವತಿಯರಿಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರನ್ನು ಬಂಧಿಸಿದ ಬಳಿಕವೇ ಅವರು ಹುಡುಗರಲ್ಲ ಹುಡುಗಿಯರು ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಈ ಯುವತಿಯರು ವೇಷ ಬದಲಿಸಿಕೊಂಡು ಬೆಂಗಳೂರು ಹೊರವಲಯದ ಸಂಪಿಗೆಹಳ್ಳಿಯಲ್ಲಿ ಕಳ್ಳತನ ಮಾಡುತ್ತಿದ್ದರು. ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು–ನೀಲು ಎಂಬ ಯುವತಿಯರು ಹುಡುಗರ ವೇಷದಲ್ಲಿ ಬೈಕ್ನಲ್ಲಿ ಓಡಾಡಿಕೊಂಡು ಮನೆ ಮಾಲೀಕರು ಹೊರಗೆ ಹೋದ ಸಮಯ ನೋಡಿ ಕಳ್ಳತನ ಮಾಡುತ್ತಿದ್ದರು. ಜನವರಿ 13ರಂದು ಯಲಹಂಕ ಸಮೀಪದ ಅಗ್ರಹಾರ ಲೇಔಟ್ನಲ್ಲಿರುವ ಆಟೋ ಚಾಲಕ ಸಂಗಮೇಶ್ ಮನೆಯವರು ಹೊರಗೆ ಹೋಗಿದ್ದನ್ನು ಖಚಿತಪಡಿಸಿಕೊಂಡು ಹಗಲಿನಲ್ಲೇ ನುಗ್ಗಿ ನಗದು ಹಾಗೂ ಇತರ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು.
ಮನೆಗೆ ಬಂದ ಸಂಗಮೇಶ್ ಕಳ್ಳತನವಾಗಿರುವುದು ನೋಡಿ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳತನದ ದೃಶ್ಯಗಳು ಲಭ್ಯವಾಗಿವೆ. ಕಳವಿಗೆ ಬಳಸಿದ್ದ ಸ್ಕೂಟಿಯ ನಂಬರ್ ಪೊಲೀಸರ ಕಣ್ಣಿಗೆ ದ್ದ ಬಳಿಕ ವಾಹನ ನೋಂದಣಿ ಸಂಖ್ಯೆ ಆಧರಿಸಿ ಬಂಧಿಸಿದ್ದಾರೆ. ಠಾಣೆಗೆ ಕರೆತಂದಾಗ ಹುಡುಗರಂತೆ ಕಾಣುತ್ತಿದ್ದ ಕಳ್ಳರು ಯುವತಿಯರು ಎನ್ನುವುದು ಗೊತ್ತಾಗಿದೆ.


