ಮಧ್ಯಮ ವರ್ಗದ ಬಹು ನಿರೀಕ್ಷಿತ ಆದಾಯ ತೆರಿಗೆ ವಿನಾಯಿತಿಯನ್ನು ಗರಿಷ್ಠ 12 ಲಕ್ಷ ರೂ.ವರೆಗೆ ಘೋಷಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ದಾಖಲೆಯ 8ನೇ ಬಜೆಟ್ ನಲ್ಲಿ ಮಧ್ಯಮ ವರ್ಗದ ಬಹುಜನರ ಬೇಡಿಕೆಯ ಆದಾಯ ತೆರಿಗೆ ವಿನಾಯಿತಿಯನ್ನು ಪರೋಕ್ಷವಾಗಿ ಗರಿಷ್ಠ 12 ಲಕ್ಷ ರೂ.ಗೆ ಏರಿಕೆಯಾಗಿದೆ.
ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಹಾಗೂ ಮಿತಿಯಲ್ಲಿ ಬದಲಾವಣೆ ಮಾಡುವ ಮೂಲಕ ನಿರ್ಮಲಾ ಸೀತರಾಮನ್ ಜಾಣತನ ಮೆರೆದಿದ್ದಾರೆ.
ಇತ್ತೀಚಿನವರೆಗೂ 5 ಲಕ್ಷ, 10 ಲಕ್ಷ ಹಾಗೂ 15 ಲಕ್ಷ ಹಾಗೂ 20 ಲಕ್ಷಕ್ಕೂ ಮೇಲ್ಪಟ್ಟು ಎಂದು ವಿಭಾಗ ಮಾಡಲಾಗಿತ್ತು. ಆದರೆ ಇದೀಗ ನಿರ್ಮಲಾ ಸೀತಾರಾಮನ್ 4 ಲಕ್ಷ ರೂ.ವರೆಗೆ ಶೇ.0ರಷ್ಟು ತೆರಿಗೆ ವಿಧಿಸಲಾಗಿದೆ.
ವಾರ್ಷಿಕ 4ರಿಂದ 8 ಲಕ್ಷ ರೂ.ವರೆಗಿನ ವೇತನ ಹೊಂದಿದವರಿಗೆ ಶೇ.5ರಷ್ಟು ತೆರಿಗೆ, 8ರಿಂದ 12 ಲಕ್ಷ ರೂ.ವರೆಗಿನವರಿಗೆ ಶೇ.10ರಷ್ಟು ತೆರಿಗೆ ವಿಧಿಸಲಾಗಿದೆ. ಶೇ.12ರಿಂದ 16 ಲಕ್ಷ ರೂ.ವರೆಗಿನ ಆದಾಯದಾರರಿಗೆ ಶೇ.15ರಷ್ಟು ಹಾಗೂ ಶೇ.16ರಿಂದ 20ರವರೆಗೆ ಶೇ.20, 20ರಿಂದ 24 ಲಕ್ಷ ರೂ. ಆದಾಯ ಹೊಂದಿದವರಿಗೆ ಶೇ.25 ಹಾಗೂ 24 ಲಕ್ಷ ರೂ. ಮೇಲ್ಪಟ್ಟು ಆದಾಯ ಹೊಂದಿದ ಶ್ರೀಮಂತರಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ.
ಇದೇ ವೇಳೆ ನಿರ್ಮಲಾ ಸೀತಾರಾಮನ್ ಮುಂದಿನ ವಾರ ನೂತನ ತೆರಿಗೆ ಬಿಲ್ ಮಂಡನೆ ಪ್ರಸ್ತಾಪಿಸಿದ್ದು, ಈ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿಗೆ ಸುಲಭವಾಗಲಿದೆ ಎಂದು ಹೇಳಿದ್ದಾರೆ.
ನಂಬಿಕೆ ಮೊದಲು ಪರಿಶೀಲನೆ ನಂತರ ಎಂಬ ಘೋಷವಾಕ್ಯದೊಂದಿಗೆ ನೂತನ ತೆರಿಗೆ ಮಸೂದೆ ಮಂಡಿಸಲಾಗುವುದು. ಸಮಸ್ಯೆಗಳನ್ನು ಸರಳೀಕರಣಗೊಳಿಸಿ ಜನರಿಗೆ ಅರ್ಥವಾಗುವ ರೀತಿ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ನೂತನ ತೆರಿಗೆ ಪದ್ಧತಿಯನ್ನು ಕಳೆದ 10 ವರ್ಷಗಳಿಂದ ಅಧ್ಯಯನ ನಡೆಸಿ ರೂಪಿಸಲಾಗಿದೆ ಎಂದು ಹೇಳಿದರು.