Menu

ಚಳ್ಳಕೆರೆಯಲ್ಲಿ ಶಿಕ್ಷಕನಿಂದ ಅತ್ಯಾಚಾರ, ಬಾಲಕಿಗೆ ಗರ್ಭಪಾತ: ಶಿಕ್ಷಕ, ವೈದ್ಯೆ ವಿರುದ್ಧ ಪೋಕ್ಸೊ ದಾಖಲು

ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ.

ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ ವೈದ್ಯೆ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಶಿಕ್ಷಕ ಹೆಚ್.ಒ. ರಾಜಣ್ಣ ಎಂಬಾತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಾಲಕಿ ಗರ್ಭ ಧರಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಆಸ್ಪತ್ರೆಯ ವೈದ್ಯೆ ಶಂಕರಲಕ್ಷ್ಮೀ ಸಹಾಯದಿಂದ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಷಯ ತಿಳಿದ ಮಕ್ಕಳ ರಕ್ಷಣಾಧಿಕಾರಿ ರೇಖಾ ಚಳ್ಳಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳಾದ ಶಿಕ್ಷಕ ಮತ್ತು ವೈದ್ಯೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬಾಲಕಿಯ ಮೇಲೆ ಬಿಹಾರ ಕಾರ್ಮಿಕನಿಂದ ಅತ್ಯಾಚಾರ

ಹೊಟ್ಟೆಪಾಡಿಗಾಗಿ ಬಿಹಾರ್​​ನಿಂದ ಬೆಂಗಳೂರಿಗೆ ಬಂದಿರುವ ಮುಸ್ಲಿಂ ಯುವಕ ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರದ ಮೊಹಮ್ಮದ್ ಮುನ್ನ ಎನ್ನುವ ಯುವಕ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ 150 ರೂಪಾಯಿ ಕೊಟ್ಟು ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *