Saturday, January 17, 2026
Menu

ಅಕ್ರಮ ಮಿಕ್ಸಿಂಗ್ ಡಾಂಬರ್ ಘಟಕ ಸ್ಥಗಿತಗೊಳಿಸಿದ ತಹಸೀಲ್ದಾ‌ರ್

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಮಿಕ್ಸಿಂಗ್ ಡಾಂಬ‌ರ್ ಘಟಕ ನಡೆಸುತ್ತಿದ್ದು ಆರೋಪ ಕೇಳಿ ಬಂದ ಹಿನ್ನೆಲೆ ತೀರ್ಥಹಳ್ಳಿ ತಹಸೀಲ್ದಾ‌ರ್ ರಂಜಿತ್‌ ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಮಾಡಲಾಗುತ್ತಿದ್ದ ಮಿಕ್ಸಿಂಗ್ ಡಾಂಬರ್ ಘಟಕ ವನ್ನು ಸ್ಥಗಿತಗೊಳಿಸಿದ್ದಾರೆ.

ಸರ್ವೇ ನಂಬರ್ 258 ರ ಗುಡ್ಡೆಕೇರಿ ಸಮೀಪದ ಹೊಸೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಮಿಕ್ಸಿಂಗ್ ಡಾಂಬ‌ರ್ ಘಟಕವನ್ನು ಅಕ್ರಮವಾಗಿ ಮಾಡಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ತಹಸೀಲ್ದಾ‌ರ್ ಪರಿಶೀಲನೆ ನಡೆಸಿ ಡಾಂಬರ್ ಘಟಕ ವನ್ನು ಸ್ಥಗಿತಗೊಳಿಸಿದ್ದಾರೆ.

ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ 9 ಗೋವುಗಳು ವಶ

ಶಿವಮೊಗ್ಗ : ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 9 ಗೋವುಗಳನ್ನು ರಕ್ಷಿಸಿರುವ ಮಾಳೂರು ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಬಳಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸುತ್ತಮುತ್ತಲ ಹಳ್ಳಿಗಳಿಂದ ಹಸುಗಳು ಮತ್ತು ಕರುಗಳನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿರುವಾಗ ಗಸ್ತಿನಲ್ಲಿದ್ದ ಮಾಳೂರು ಪೊಲೀಸರು ಅನುಮಾನಗೊಂಡು ಗೋವುಗಳಿದ್ದ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲಿಸಿದಾಗ ಹಸುಗಳಿರುವುದು ಪತ್ತೆಯಾಗಿದೆ.

ಸಣ್ಣ ವಾಹನದಲ್ಲಿ ಒಂಬತ್ತು ಹಸುಗಳನ್ನು ಸ್ವಲ್ಪವೂ ಜಾಗವಿಲ್ಲದೆ ಇಕ್ಕಟ್ಟಾಗಿ ಬಂಧಿಸಿ ಸಾಗಿಸುತ್ತಿದ್ದರು. ಕೂಡಲೆ ಹಸುಗಳನ್ನು ವಶಕ್ಕೆ ಮಾಳೂರು ಠಾಣಾ ಪೊಲೀಸರು ಪಡೆದಿದ್ದಾರೆ. ಶಿವಮೊಗ್ಗದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಶಕ್ಕೆ ಪಡೆದ ಗೋವುಗಳನ್ನು ಸುರಕ್ಷಿತವಾಗಿ ಶಿವಮೊಗ್ಗದ ಗೋಶಾಲೆಯೊಂದಕ್ಕೆ ಕಳುಹಿಸಲಾಗಿದೆ ಎಂದು ಮಾಳೂರು ಪಿಎಸ್‌ಐ ಸಂತೋಷ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *