Menu

ಮಹಿಳೆ ಆತ್ಮಹತ್ಯೆ: ವಿಷಯ ತಿಳಿದು ಆಸ್ಪತ್ರೆಗೆ ಬರುತ್ತಿದ್ದ ಪತಿ ಅಪಘಾತದಲ್ಲಿ ಸಾವು

ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಆಸ್ಪತ್ರೆಗೆ ಆಗಮಿಸುತ್ತಿದ್ದ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ನಡೆದಿದೆ. ಮಧುರಾ ಕರೆಪ್ಪ ಮಾದರ (30), ಕರೆಪ್ಪ ಗಂಗಪ್ಪ ಮಾದರ (36) ಮೃತ ದಂಪತಿ.‌ ಮಧುರಾ ಹೊಟ್ಟೆನೋವಿನಿಂದ ಬಳಲುತ್ತಿದ್ದು, ನೊಂದು ವಿಷ ಸೇವಿಸಿದ್ದರು. ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸದೆ ಮಧುರಾ ಮೃತಪಟ್ಟಿದ್ದಾರೆ. ಪತ್ನಿ

ಮತ್ತೊಂದು ಮದುವೆಯಾದ ಪತಿ: ಮಕ್ಕಳ ಕೊಂದು ಸುಸೈಡ್‌ ಮಾಡಿಕೊಂಡ ಪತ್ನಿ

ಪತಿ ಮತ್ತೊಂದು ಮದುವೆಯಾದ ಕಾರಣಕ್ಕೆ ನೊಂದ ಮಹಿಳೆ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಎಸ್ ಬಾನೋತ್ ಶ್ರಾವಂತಿ (29) ಮತ್ತು ಮಕ್ಕಳಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಎಂದು ಗುರುತಿಸಲಾಗಿದೆ. ದೀರ್ಘಕಾಲದ ಕೌಟುಂಬಿಕ ಕಲಹವೇ ಈ

ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್‌ ಯುವತಿ ಸುಸೈಡ್‌

ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಾಗಾಲ್ಯಾಂಡ್‌ನ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಲಿನ್ಸುಲಾ (22) ಎಂದು ಗುರುತಿಸಲಾಗಿದೆ. ಯುವತಿ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ದಿನದ ಹಿಂದೆ ಕಿವಿಶೆ ಕಿನಿಮಿ ಎಂಬವರ ಜೊತೆ ಅರ್ಧ ಗಂಟೆ ಮಾತನಾಡಿದ್ದಳು

ಮಗನಿಗೆ ಅನೈತಿಕ ಸಂಬಂಧ: ಕುಟುಂಬಕ್ಕೆ ಬಹಿಷ್ಕಾರದಿಂದ ನೊಂದು ತಾಯಿ ಆತ್ಮಹತ್ಯೆ

ಮಗ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ತಾಯಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನೊಂದು ಆಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ. ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42)

ಲಿವ್‌-ಇನ್‌ನಲ್ಲಿದ್ದಾತ ಬೇರೆಯವಳೊಂದಿಗೆ ಮದುವೆ: ವೀಡಿಯೊ ಮಾಡಿಟ್ಟು ಮಹಿಳೆ ಸುಸೈಡ್‌

ನಾಲ್ಕು ವರ್ಷ ನನ್ನ ಜೊತೆ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಬೇರೆ ಮಹಿಳೆಯನ್ನು ಮದುವೆಯಾಗುತ್ತಿರುವುದಾಗಿ ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಆಕೆ ವೀಡಿಯೊ ಮಾಡಿಟ್ಟು, ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ

ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಟೆಕ್ಕಿ ಮಹಿಳೆ ಸುಸೈಡ್‌

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದಿಂದ ನೊಂದು ಟೆಕ್ಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ, ಅತ್ತೆಯ ಕಾಟದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ನಿವಾಸಿ ಸುಶ್ಮಾ

ಜ್ಯೋತಿಷಿಯ ಮಾತಿಗೆ ಹೆದರಿ ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡರಾ?

ಬೆಂಗಳೂರು ನಗರದ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಜ್ಯೋತಿಷಿಯು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿಕೊಂಡ ಟೆಕ್ಕಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಕೆ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿ ವರ್ಕ್ ಫ್ರಂ ಹೋಮ್‌ನಲ್ಲಿದ್ದರು.

ಪ್ರವಾಸ ವಿಚಾರದಲ್ಲಿ ಪತಿಯೊಂದಿಗೆ ಜಗಳ: ಮೈಸೂರಿನಲ್ಲಿ ಮಹಿಳೆ ಆತ್ಮಹತ್ಯೆ

ಮೈಸೂರಿನ ಸರಸ್ವತಿಪುರಂನಲ್ಲಿ ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನಿರಾಕರಿಸಿದ್ದಕ್ಕೆ ನೊಂದುಕೊಂಡ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 46 ವರ್ಷದ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡವರು. ಮಹಿಳೆಯ ಸಂಬಂಧಿಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಮನೆಯಲ್ಲಿ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು

ವೇಶ್ಯಾವಾಟಿಕೆಗೆ ಅತ್ತೆಯ ಒತ್ತಾಯ ಆರೋಪ: ಬೀದರ್‌ನಲ್ಲಿ ಮಹಿಳೆ ಆತ್ಮಹತ್ಯೆ

ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ವೇಶ್ಯಾವಾಟಿಕೆಗೆ ಅತ್ತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಸೊಸೆ 11 ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂಜನಾಬಾಯಿ ಶೇಖರ್ ಪಾಟೀಲ್(22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಪತಿ

ತುಮಕೂರಿನಲ್ಲಿ ಪಿರಿಯಡ್ಸ್‌ ಹೊಟ್ಟೆ ನೋವು ತಾಳಲಾಗದೆ ಯುವತಿ ಸುಸೈಡ್‌

ತುಮಕೂರು ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ಯುವತಿಯೊಬ್ಬಳು ಋತುಸ್ರಾವದ ವೇಳೆ ಬಾಧಿಸುವ ಹೊಟ್ಟೆನೋವು ತಾಳಿಕೊಳ್ಳಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 19 ವರ್ಷದ ಕೀರ್ತನಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಲಬುರಗಿ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ನಿವಾಸಿ ಕೀರ್ತನಾ ತುಮಕೂರಿನ ಬ್ಯಾತ ಗ್ರಾಮದಲ್ಲಿ