Menu

ಚಲಿಸುವ ರೈಲಿನಲ್ಲೂ ಎಟಿಎಂನಲ್ಲಿ ಹಣ ಡ್ರಾ ಮಾಡಬಹುದು!

ಮುಂಬೈ: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವವರು ಊಟ, ತಿಂಡಿ ಜೊತೆಗೆ ಬೇಕೆಂದಾಗ ಹಣವನ್ನೂ ಬಿಡಿಸಬಹುದು. ಹೌದು, ಇದಕ್ಕಾಗಿ ಭಾರತೀಯ ರೈಲ್ವೆಯು ಎಟಿಎಂ ಸೌಲಭ್ಯವನ್ನು ಪರಿಚಯಿಸಿದೆ. ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದೆ. ಇದು ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೈಲು ಚಲಿಸುವಾಗಲೂ ಪ್ರಯಾಣಿಕರು ಹಣ ಡ್ರಾ ಮಾಡಬಹುದು. ಭಾರತೀಯ ರೈಲ್ವೆಯ