Sutaka
ಇಂದು ಮೈಸೂರಿನಲ್ಲಿ ಚಾಮುಂಡಿ ದರ್ಶನವಿಲ್ಲದೆ ಭಕ್ತರು ವಾಪಸ್ ಏಕೆ
ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾದ ಎರಡನೇ ದಿನವಾದ ಮಂಗಳವಾರ ಸೂತಕ ಆವರಿಸಿದೆ. ಸೋಮವಾರ ತಡ ರಾತ್ರಿ ಚಾಮುಂಡಿಬೆಟ್ಟದ ಶಿವಾರ್ಚಕ ರಾಜು ಮೃತಪಟ್ಟಿದ್ದು, ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಾರ್ವಜನಿಕರಿಗೆ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ದೇವಿಯ ದರ್ಶನ ಇಲ್ಲದಂತಾಗಿದೆ. ಈ ಸೂತಕದ ಕಾರಣ ನವರಾತ್ರಿಯ 2ನೇ ದಿನ ದೇವಿಗೆ ಯಾವುದೇ ಪೂಜಾ ಕಾರ್ಯ ಇಲ್ಲ ಹಾಗೂ ಭಕ್ತರಿಗೆ ಮೂಲ ವಿಗ್ರಹ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.


