Menu

ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭ, ವಿಶೇಷ ಭದ್ರತೆ

  ಪವಿತ್ರ ಚಾರ್‌ಧಾಮ್‌ ಯಾತ್ರೆಯು ಇಂದಿನಿಂದ ಆರಂಭಗೊಳ್ಳಲಿದೆ. ಈ ಬಾರಿ ಚಾರ್‌ಧಾಮ್ ಯಾತ್ರೆಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯಾಣ ಮಾರ್ಗದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆ ಸಾಗುವ ಹಾದಿಯ ಮತ್ತು ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ. ದೇವಭೂಮಿ ಎಂದೂ ಹೆಸರಾಗಿರುವ ಉತ್ತರಾಖಂಡವು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಉತ್ತರಾಖಂಡದಲ್ಲಿ ಭಕ್ತರು ಭೇಟಿ ನೀಡುವ ಅಸಂಖ್ಯಾತ ಧಾರ್ಮಿಕ ತಾಣಗಳಲ್ಲಿ ಚಾರ್ ಧಾಮ್ ಯಾತ್ರೆ ಪ್ರಮುಖವಾದುದು.