sit-ups punishment
ತಡವಾಗಿ ಬಂದಿದ್ದಕ್ಕೆ ಬ್ಯಾಗ್ ಜೊತೆ 100 ಸಿಟಪ್ಸ್ ಶಿಕ್ಷೆ: ಶಾಲಾ ಬಾಲಕಿ ಸಾವು
ಮಹಾರಾಷ್ಟ್ರದ ವಸೈಯಲ್ಲಿರುವ ಶಾಲೆಗೆ ಮಕ್ಕಳ ದಿನಾಚರಣೆಯಂದು ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ನೀಡಿದ ಶಿಕ್ಷೆಗೆ ಆರನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆಯೊಂದು ನಡೆದಿದೆ. ವಸೈನಲ್ಲಿರುವ ಶ್ರೀ ಹನುಮಂತ್ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಶುಕ್ರವಾರ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಹತ್ತು ನಿಮಿಷ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ100 ಸಿಟಪ್ಸ್ ಶಿಕ್ಷೆ ನೀಡಿದ್ದರು. ಘಟನೆ ಕುರಿತು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ ಕಾಜಲ್ ಗೊಂಡ್ ಮೃತಪಟ್ಟ ಬಾಲಕಿ. ಶಾಲೆಗೆ ತಡವಾಗಿ


