Siddhalingeshwara Shri
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನದ ಸಂಗಮ ಎಡೆಯೂರು ಸಿದ್ಧಲಿಂಗೇಶ್ವರ ಶ್ರೀ
ಎಡೆಯೂರು ಸಿದ್ಧಲಿಂಗೇಶ್ವರ ಶ್ರೀಗಳು ಅಲ್ಲಮಪ್ರಭುವಿನ ವೈರಾಗ್ಯ, ಬಸವಣ್ಣನವರ ಭಕ್ತಿ, ಚೆನ್ನಬಸವಣ್ಣನ ಜ್ಞಾನದ ತ್ರಿವೇಣಿ ಸಂಗಮವೆಂದು ಗದಗದ ಡಾ.ತೋಂಟದ ಸಿದ್ಧಲಿಂಗಸ್ವಾಮಿಗಳು ಹೇಳುತ್ತಾರೆ. ಅಚಾರ್ಯ, ಅವಧೂತ, ಪವಾಡಪುರುಷರಾಗಿ ಮೇಲ್ವರ್ಗ ಕೆಳವರ್ಗವನ್ನು ಶರಣ ಚಳುವಳಿಯಲ್ಲಿ ಒಟ್ಟಾಗಿಸಿದ ಸಂತ ಇವರು. ಸಿದ್ಧಲಿಂಗ ಯತಿಗಳ ಕಾಲ ನಿರ್ಣಯ, ಸ್ಥಳ ನಿರ್ಣಯದ ಬಗ್ಗೆ ಗೊಂದಲವಿದೆ. ಶಾಂತೇಶ ಕವಿಯ ಸಿದ್ಧೇಶ್ವರಪುರಾಣ, ಕವಿ ಪವಾಡನ ತೋಟದ ಸಿದ್ಧಲಿಂಗ ತಾರಾವಳಿ, ಸುವ್ವಿಮಲ್ಲನ ಸಿದ್ಧೇಶ್ವರ ಸಾಂಗತ್ಯ ಕೃತಿಗಳು, ಎಡೆಯೂರು ಮತ್ತು ಕಗ್ಗರೆ ಶಾಸನಗಳು ಸಿದ್ಧಲಿಂಗೇಶ್ವರ


