Menu

ಎಲ್‌ಪಿಜಿ ವ್ಯತ್ಯಯ: ಕಾರ್ಪೋರೇಟ್‌ ಕಂಪೆನಿಗಳಿಗೂ ತಟ್ಟಿದ ಬಿಸಿ

ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗದ ಕಾರಣ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲು ಮುಂದಾಗಿದೆ. ಎಚ್​ಸಿಎಲ್​ಟೆಕ್ ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದೆ. ಇರಾನ್‌- ಇಸ್ರೇಲ್‌ ಯುದ್ಧದ ಭಾಗವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಹೊತ್ತಿ ಉರಿಯುತ್ತಿರುವುದರಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಲಭ್ಯತೆ ದುಸ್ತರವಾಗಿ ಪರಿಣಮಿಸಿದೆ. ಹೋಟೆಲ್​ಗಳು ಈ ಸಮಸ್ಯೆ ಬಗೆಹರಿಯುವವರೆಗೂ