Nuclear disarmament deal
ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರದಿದ್ದರೆ ವಿನಾಶಕಾರಿ ದಾಳಿ: ಇರಾನ್‌ಗೆ ಟ್ರಂಪ್ ಬೆದರಿಕೆ
ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸಿ ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರಲು ಸಮಯ ಮೀರುತ್ತಿದೆ, ಒಪ್ಪಂದಕ್ಕೆ ಬರದಿದ್ದರೆ ಮುಂದಿನ ದಾಳಿ ತುಂಬಾ ಕೆಟ್ಟದಾಗಿ ಮತ್ತು ವಿನಾಶಕಾರಿಯಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಬೆದರಿಕೆಯೊಡ್ಡಿದ್ದಾರೆ. ಟ್ರೂತ್ ಸೋಷಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, ಇರಾನ್ ಕಡೆಗೆ ಬೃಹತ್ ನೌಕಾಪಡೆ ಸಾಗುತ್ತಿದೆ. ಇದು ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್ ನೇತೃತ್ವದಲ್ಲಿದೆ. ವೆನಿಜುವೆಲಾ ಕಡೆಗೆ ಕಳುಹಿಸಿರುವ ನೌಕೆಗಿಂತಲೂ ದೊಡ್ಡದು. ಅಗತ್ಯ


