Luthra brothers arrest
ಗೋವಾ ನೈಟ್ ಕ್ಲಬ್ ದುರಂತ: ಪಲಾಯನ ಮಾಡಿದ್ದ ಮಾಲೀಕರಾದ ಲುತ್ರಾ ಸೋದರರು ಥೈಲ್ಯಾಂಡ್‌ನಲ್ಲಿ ಅರೆಸ್ಟ್
ಕಳೆದ ಶನಿವಾರ ರಾತ್ರಿ ಗೋವಾದ ಬೀರ್ಚ್ ಬೈ ನೈಟ್‌ಕ್ಲಬ್‌ನಲ್ಲಿ ಅಗ್ನಿ ದುರಂತ ನಡೆದು ೨೫ ಮಂದಿ ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಥೈಲ್ಯಾಂಡ್ ಪೊಲೀಸರು ಲುತ್ರಾ ಸಹೋದರರನ್ನು ಭಾರತಕ್ಕೆ ಗಡಿಪಾರು ಮಾಡಲಿದ್ದಾರೆ. ಭಾರತದಿಂದ ಪಲಾಯನ ಮಾಡಿದ್ದ ಕ್ಲಬ್ ಮಾಲೀಕರನ್ನು ಕರೆ ತರಲು ಭಾರತೀಯ ಅಧಿಕಾರಿಗಳ ತಂಡ ಈಗಾಗಲೇ ಥೈಲ್ಯಾಂಡ್‌ಗೆ ಪ್ರಯಾಣಿಸಿದೆ. ಕ್ಲಬ್ ದುರಂತ ನಡೆದ


