Menu

ತಿಂಗಳುಗಟ್ಟಲೇ ಒಂದೇ ಕಡೆ ನಿಲ್ಲಿಸಿರುವ ವಾಹನಗಳ ಹರಾಜಿಗೆ ಜಿಬಿಎ ಸಿದ್ಧ

ಬೆಂಗಳೂರಿನಲ್ಲಿ ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹರಾಜಿಗಿಡಲಿದೆ. ಎಷ್ಟೇ ಬಾರಿ ವಾಹನ ತೆರವು ಮಾಡಿ ಅಂದ್ರೂ ವಾಹನ ಮಾಲೀಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿರುವುದರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚುತ್ತಿದೆ. ಹೀಗಾಗಿ ಸಂಚಾರ ಪೊಲೀಸ್ ಇಲಾಖೆ ಜೊತೆ ಟೋಯಿಂಗ್ ಮಾಡಿ ವಾಹನಗಳನ್ನು ಹರಾಜು ಹಾಕಲು ಜಿಬಿಎ ಎಲ್ಲ ಸಿದ್ಧತೆ ನಡೆಸುತ್ತಿದೆ. ಆಯಾ ಪಾಲಿಕೆಯಲ್ಲಿ ನಿಂತ ವಾಹನಗಳನ್ನು ಪಾಲಿಕೆ ಅಧಿಕಾರಿಗಳು ಹರಾಜು ಮಾಡಲಿದ್ದಾರೆ.