Lokesh Bekkalale
ಲೋಕೇಶ ಬೆಕ್ಕಳಲೆ ಕೃತಿ ‘ಸಿದ್ಧಾಂತದಾಚೆಗೆ’ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುವೊಬ್ಬ ಆರೋಗ್ಯಕರ ಪ್ರೋಟೀನ್ ಮತ್ತು ಉತ್ತಮ ಪೌಷ್ಟಿಕಾಂಶಗಳ ಆಹಾರ ಕ್ರಮ ಪಾಲಿಸುವುದು ಎಷ್ಟು ಅಗತ್ಯವೋ, ವಿದ್ಯಾರ್ಥಿಗಳೊಂದಿಗೆ ಒಡನಾಡುವ ಮೇಷ್ಟ್ರು ಲೋಕಜ್ಞಾನ ಪಡೆಯುವುದು ಅತಿ ಅವಶ್ಯ ಎಂದು ಹೇಳುವ, ವಿದ್ಯಾರ್ಥಿಗಳನ್ನು ಭವಿಷ್ಯದ ಸುಂದರ ಬದುಕಿಗೆ ಅಣಿಗೊಳಿಸುವುದು, ಸಮಾಜಮುಖಿಯಾಗಿ ಚಿಂತಿಸುವಂತೆ ಮಾಡುವುದು ಭಾಷಾಶಿಕ್ಷಕನ ಕರ್ತವ್ಯವೆಂದು ನಂಬಿ ಪಾಲಿಸುತ್ತಿರುವ ಕನ್ನಡ ಮೇಷ್ಟ್ರು ಲೋಕೇಶ ಬೆಕ್ಕಳಲೆ. ಕೋಶ ಓದುವ ಮತ್ತು ದೇಶ ಸುತ್ತುವ ಹವ್ಯಾಸ ರೂಢಿ ಮಾಡಿಕೊಂಡಿರುವವರು. ದೇಶ ಸುತ್ತಿದ್ದಕ್ಕೆ ಕೋಶ


