Sunday, September 13, 2026
Menu

ಆಧುನಿಕತೆಯ ಭರಾಟೆಯಲ್ಲಿ ‘ಅಧ್ಯಾತ್ಮದ ನಾಶ’

ಮೊಬೈಲ್ ನಮ್ಮ ಕೈಗೆ ಸಿಕ್ಕಿದುದೇ ತಡ ಜಗತ್ತೆಲ್ಲ ಒಂದಾಯಿತು. ನಮ್ಮವರೆಲ್ಲ ಹತ್ತಿರವಾದರು. ಇದು ನಮ್ಮ ಬದುಕನ್ನು ಇನ್ನಷ್ಟು ಸುಖದತ್ತ ಸಾಗುವಂತೆ ಮಾಡಿತೆಂದು ಭಾವಿಸಿದವರೇ ಹೆಚ್ಚು. ಅದಕ್ಕೆ ತಕ್ಕಂತಹ ಪ್ರಚಾರವೂ ದೊರೆಯಿತು. ಆದರೆ ಆಗಿದ್ದೇನು? ಮನೆಮಂದಿಯೊಂದಿಗೆ, ಅಕ್ಕಪಕ್ಕದ ಮನೆಯವರೊಂದಿಗೆ ಮುಖಾಮುಖಿ ಭೇಟಿಯನ್ನೂ ನಾಶ ಮಾಡಿತೆಂದರೆ ತಪ್ಪಾಗಲಾರದು. ‘ವಿಜ್ಞಾನ ಮತ್ತು ನಾಗರಿಕತೆಯ ಥಳಕು ಬಳುಕುಗಳು ಕಣ್ಣು ಕೋರೈಸುವಂತಿದ್ದರೂ ಸಹ ನಾನು ಸ್ಪಷ್ಟವಾಗಿ ಹೇಳುತ್ತೇನೆ -ಅದು ವ್ಯರ್ಥವೆಂದು. ಅಧ್ಯಾತ್ಮವನ್ನು ತೊರೆಯಬೇಡಿರಿ. ಅದೊಂದೇ ಉಳಿಯುವುದು. ಇತರ

ತಪ್ಪಿ ಹೋಗುವ ಬದುಕಿನ ಲೆಕ್ಕಾಚಾರ ತಿಳಿಸುವ ಟಿ. ಎಸ್. ಗೊರವರ ಕವಿತೆ

‘ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎನ್ನುತ್ತಾರಲ್ಲ. .ಹಾಗೆ ಜತನದಿಂದ ಕೂಡಿಟ್ಟ ಭವಿಷ್ಯದ ಕನಸುಗಳೆಲ್ಲ ಯಾರೋ ಹಾಕಿದ ದಾಳಕ್ಕೆ ನುಚ್ಚುನೂರಾಗಿ ಭ್ರಮನಿರಸನಗೊಳಿಸುತ್ತವೆ. ಬದುಕನ್ನು ಎಷ್ಟೇ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಹಿಡಿತದಿಂದ ಬಾಳುವೆ ಮಾಡಿದರೂ ಹಾಸಿಗೆಯ ಹೊರಗೆ ಕಾಲು ಇಣುಕಿ ಬಿಡುತ್ತವೆ. ಹಾಗಿದ್ದರೆ

ಭೂಮಿ ಉಳಿದರೆ ಮಾತ್ರ ಬದುಕಿನ ಭರವಸೆ

ಚೀನಾ ದೇಶವು ವಿಶ್ವದಲ್ಲಿಯೇ ಅತಿಹೆಚ್ಚು ಪವನ ಮತ್ತು ಸೌರ ವಿದ್ಯುತ್ ಅನ್ನು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಉರುಗ್ವೆ ದೇಶವು ಆಂತರಿಕ ಬಳಕೆಯ ೯೮% ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳಿಂದಲೇ ಉತ್ಪಾದಿಸಿ ಜಗತ್ತಿಗೆ ಮಾದರಿಯಾಗಿದೆ. ಕೀನ್ಯಾ ದೇಶವು ಬೇಡಿಕೆಯ ಸುಮಾರು ಅರ್ಧದಷ್ಟು ವಿದ್ಯುತ್

ಬದುಕಿನಲ್ಲಿ ಕೊಂಡುಕೊಳ್ಳಲಾಗದ ನೆಮ್ಮದಿಯನ್ನು ಕಂಡುಕೊಳ್ಳಿ

ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ಕಂಡುಕೊಳ್ಳಬೇಕಷ್ಟೆ, ನೆಮ್ಮದಿಯನ್ನು ಗುರುತಿಸುವುದರಲ್ಲಿ ಸಫಲವಾದರೆ ಸಂತೋಷ,  ಅದರೊಟ್ಟಿಗೆ ಕುಣಿಕುಣಿಯುತ್ತ ನಮ್ಮನ್ನು ಅಪ್ಪಿಕೊಳ್ಳುವುದು. ಅಡಗಿರುವ ನೆಮ್ಮದಿ ಕಂಡುಕೊಳ್ಳುವ ಬಗೆ ತಿಳಿದುಕೊಂಡರೆ ಕಷ್ಟಕಾಲದಲ್ಲೂ ಸುಖಿಗಳಾಗಿ ಇರಲಿಕ್ಕೆ ಸಾಧ್ಯ. ನೆಮ್ಮದಿ ಎಂದರೆ ಏನು ಎಂಬ