Menu

ಶಬರಿಮಲೆಯಿಂದ 100 ಕಿ.ಮೀ. ದೂರದಲ್ಲಿ ವಾಹನ ತಡೆದು ಕರ್ನಾಟಕದ  ಭಕ್ತರಿಗೆ ಲಾಠಿ ಏಟು

ಮಕರ ಸಂಕ್ರಮಣದ ಜ್ಯೋತಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಸಾವಿರಾರು ಭಕ್ತರ ವಾಹನಗಳನ್ನು ಕೇರಳ ಪೊಲೀಸರು ತಡೆ ಹಿಡಿದಿದ್ದು, ಪ್ರತಿಭಟಿಸಿದ ರಾಜ್ಯದ ಭಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ 5000ಕ್ಕೂ ಅಧಿಕ ಭಕ್ತರು ಖಾಸಗಿ ವಾಹನಗಳ ಮೂಲಕ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದು, ಶಬರಿಮಲೆಯಿಂದ 60 ಕಿ.ಮೀ. ದೂರದ ಎರಿಮಲೆಯಲ್ಲಿ ವಾಹನಗಳನ್ನು ತಡೆ ಹಿಡಿಯಲಾಗಿದೆ. ಶಬರಿಮಲೆಯಲ್ಲಿ ನೂಕುನೂಗ್ಗಲು ಉಂಟಾಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ನ್ಯಾಯಾಲಯದ ಸೂಚನೆ