Menu

ಮಂಡಿಯಲ್ಲಿ ಮಳೆಗೆ ಭೂಕುಸಿತ: ಆರು ಮಂದಿ ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಬಾಲಕಿ ಸೇರಿದಂತೆ ಕನಿಷ್ಠ ಆರು ಜನ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಗುಡ್ಡದ ದೊಡ್ಡ ಭಾಗ ಹಠಾತ್ತನೆ ಕುಸಿದು ಎರಡು ಮನೆಗಳು ನಜ್ಜುಗುಜ್ಜಾಗಿದ್ದು, ಕುಟುಂಬಗಳು ಒಳಗೆ ಸಿಲುಕಿಕೊಂಡಿವೆ, ಅಧಿಕಾರಿಗಳ ಪ್ರಕಾರ, ಇದುವರೆಗೆ ಆರು ಶವಗಳನ್ನು ಹೊರತೆಗೆಯಲಾಗಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದ ಮಾಹಿತಿ ಪಡೆದ ಭಾರತೀಯ ಸೇನಾ