Kottur family murder
ಅನ್ಯ ಸಮುದಾಯದವನ ಪ್ರೀತಿ: ಕೊಟ್ಟೂರಿನಲ್ಲಿ ತಂದೆ, ತಾಯಿ, ಗರ್ಭಿಣಿ ಸೋದರಿ ಹತ್ಯೆಗೆ ಕಾರಣ
ವಿಜಯನಗರದ ಕೊಟ್ಟೂರಿನಲ್ಲಿ ತಂದೆ, ತಾಯಿ, ಸೋದರಿಯ ಹತ್ಯೆ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು ಈ ಭೀಕರ ಕೊಲೆಗೆ ಕಾರಣವೇನು ಎಂಬುದನ್ನು ಬಯಲಿಗೆಳೆದಿದ್ದಾರೆ. ತಂಗಿ ಅನ್ಯ ಸಮುದಾಯದವನನ್ನು ಪ್ರೀತಿಸುತ್ತಿದ್ದು, ಗರ್ಭಿಣಿಯಾ ಗಿರುವ ಕಾರಣಕ್ಕೆ ಕುಟುಂಬದ ಗೌರವ ಉಳಿಸಲು ಮೂವರನ್ನೂ ಕೊಲೆ ಮಾಡಿದ್ದಾಗಿ ಆರೋಪಿ ಅಕ್ಷಯ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ತಂಗಿಗೆ ಬೆಂಬಲ ನೀಡುತ್ತಿದ್ದ ಕಾರಣಕ್ಕೆ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ. ತಂಗಿ


