Menu

ಶಿಕಾರಿಪುರ ರಸ್ತೆಯಲ್ಲಿದ್ದ ನಾಡ ಬಾಂಬ್‌ ಕೆಎಸ್ಸಾರ್ಟಿಸಿ ಬಸ್‌ ಟೈರ್‌ಗೆ ಸಿಲುಕಿ ಸ್ಫೋಟ: ತಪ್ಪಿದ ದುರಂತ

ಶಿವಮೊಗ್ಗ ಶಿಕಾರಿಪುರದ ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ಮೇಲೆ ಕೆಎಸ್ಆರ್‌ಟಿಸಿ ಬಸ್ ಸಂಚರಿಸಿದ್ದು, ಹಿಂಬದಿಯ ಟೈರ್‌ಗೆ ಸಿಲುಕಿ ಸ್ಫೋಟಗೊಂಡಿದೆ. ಅದೃಷ್ಟವಷಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಶಿಕಾರಿಪುರ ತಾಲೂಕಿನ ಹಿರೇಕವಲತ್ತಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಬಸ್‌ ಮುಡುಬಾ ಸಿದ್ಧಾಪುರದಿಂದ ಶಿಕಾರಿಪುರಕ್ಕೆ ಸಂಚರಿಸುತ್ತಿತ್ತು. ನಾಡಬಾಂಬ್ ಸ್ಫೋಟದ ಸದ್ದು ಕೇಳಿ ಚಾಲಕ- ನಿರ್ವಾಹಕ ಬಸ್‌ ನಿಲ್ಲಿಸಿ ಪರಿಶೀಲಿಸಿದಾಗ ನಾಡ ಬಾಂಬ್‌ ಸ್ಫೋಟಗೊಂಡಿರುವುದ ತಿಳಿದಿದೆ. ಹಂದಿಗಳಿಂದ ತಮ್ಮ ಬೆಳೆ ರಕ್ಷಣೆಗೆ ಸ್ಥಳೀಯ ರೈತರು ನಾಡ ಬಾಂಬ್ ಬಳಸುತ್ತಾರೆ.