kannada news
10 ತಿಂಗಳು ಮನೆ ಬಾಡಿಗೆ ಮುಂಗಡ ಪಡೆಯುವಂತಿಲ್ಲ: ಹೊಸ ಗೃಹ ಬಾಡಿಗೆ ನಿಯಮ ಜಾರಿ
ಬೆಂಗಳೂರು: ಬಾಡಿಗೆಗೆ ಮನೆ ಕೊಡುವಾಗ ಸೇಫ್ಟಿ ಡೆಪಾಸಿಟ್ (Home rental advance) ಆಗಿ 10 ತಿಂಗಳ ಬಾಡಿಗೆ ಮೊತ್ತವನ್ನು ಮುಂಗಡವಾಗಿ ಪಡೆಯುವಂತಿಲ್ಲ ಎಂದು ಹೊಸ ಗೃಹ ಬಾಡಿಗೆ ನಿಯಮಗಳನ್ನು ಜಾರಿ ಮಾಡಲಾಗಿದೆ. ಹೊಸ ಗೃಹ ಬಾಡಿಗೆ ನಿಯಮಗಳ ಪ್ರಕಾರ ಮನೆ ಮಾಲೀಕರು ಮುಂಗಡವಾಗಿ 10 ತಿಂಗಳು ಬಾಡಿಗೆ ಹಣವನ್ನು ಠೇವಣಿಯಾಗಿ ಪಡೆಯಬಾರದು. ಒಂದು ವೇಳೆ ಮುಂಗಡವಾಗಿ ಎರಡು ತಿಂಗಳು ಬಾಡಿಗೆ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಸೂಚಿಸಿದೆ. ಬೆಂಗಳೂರಿನಲ್ಲಿ
ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ಅಕ್ರಮ ಗ್ರಾವೆಲ್ ಸಾಗಾಟಕ್ಕೆ ಪೊಲೀಸ್ ಬ್ರೇಕ್
ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ನಡೆಯುತ್ತಿದೆ ಎನ್ನಲಾಗಿರುವ ಅಕ್ರಮ ಗ್ರಾವೆಲ್ ಸಾಗಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅಕ್ರಮ ಅದಿರು, ಅಕ್ರಮ ಮರಳು ಸಾಗಾಟದ ಬಳಿಕ ಬಳ್ಳಾರಿಯಲ್ಲಿ ಗ್ರಾವೆಲ್ ಸಾಗಾಟ ದಂಧೆ ಗರಿಗೆದರಿದೆ. ಬಳ್ಳಾರಿಯ ಮೋಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಪ್ಲಿ ಶಾಸಕರ
ಅನೈತಿಕ ಸಂಬಂಧ: ಚಿಕ್ಕಮಗಳೂರಲ್ಲಿ ಅತ್ತೆ ಮಗನಿಂದ ಮಹಿಳೆಯ ಕೊಲೆ
ಅನೈತಿಕ ಸಂಬಂಧದಲ್ಲಿ ಉಂಟಾದ ಮನಸ್ತಾಪದ ಕಾರಣ ಅತ್ತೆಯ ಮಗನೇ ಮಹಿಳೆಯನ್ನು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿದ್ದಾರೆ. ಕಳೆದೆರೆಡು ದಿನದ ಹಿಂದೆ ಅರೆನೂರು ಗ್ರಾಮದ ಸಂಧ್ಯಾ ಎಂಬ
ಮದುವೆಯಾಗಿ ಎರಡೇ ದಿನಕ್ಕೆ ಭದ್ರಾವತಿಯಲ್ಲಿ ವರ ಹೃದಯಾಘಾತಕ್ಕೆ ಬಲಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮದುವೆಯಾಗಿ ಎರಡೇ ದಿನಕ್ಕೆ ವರ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹನುಮಂತಪುರ ನಿವಾಸಿ ರಮೇಶ್ (30) ಹೃದಯಾಘಾತದಿಂದ ಮೃತಪಟ್ಟವರು. ಮದುಮಗನಾಗಿ ರಮೇಶ್ ಶಿವಮೊಗ್ಗದ ಗಾಜನೂರು ಬಂಡ್ರಿಯಲ್ಲಿರುವ ವಧುವಿನ ಮನೆಗೆ ಹೋದ ಸಂದರ್ಭದಲ್ಲಿ ಏಕಾಏಕಿ ಹೃದಯಾಘಾತಗೊಂಡಿದೆ, ತಕ್ಷಣವೇ ಆಸ್ಪತ್ರೆಗೆ
ಕಮಿಷನ್ ದಂಧೆಯಲ್ಲಿ ಸಂಪೂರ್ಣ ಮುಳುಗಿದ ರಾಜ್ಯ ಸರ್ಕಾರ: ಆರ್ ಅಶೋಕ
ಬೆಂಗಳೂರು: 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ @INCKarnataka ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಸ್ವಾಮಿ ಸಿಎಂ @siddaramaiah ನವರೇ ಹಾಗು ಡಿಸಿಎಂ
ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ, ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನೂ ವಿದ್ಯಾರ್ಥಿಗಳು ಹೊಂದಿರಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸಾಧ್ಯ.
7 ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ 24 ಲಕ್ಷ ರೂಪಾಯಿ ಕೊಟ್ಟು ತಗೊಂಡಿದ್ದೆ: ಡಿಕೆ ಶಿವಕುಮಾರ್
ಈ ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದೆ. ನಾನು ಇದನ್ನು ನನ್ನ ಕ್ರೆಟಿಡ್ ಕಾರ್ಡ್ ಮೂಲಕ 24 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್
ತುಮಕೂರು- ಬೆಂಗಳೂರು- ಮೈಸೂರು ಚತುಷ್ಪಥ ರೈಲು ಮಾರ್ಗದ ಸಮೀಕ್ಷೆ ಶೀಘ್ರ ಪೂರ್ಣ: ಸಚಿವ ಎಂ ಬಿ ಪಾಟೀಲ
ಬೆಂಗಳೂರು: ರಾಜಧಾನಿ ಮತ್ತು ದೂರದ ವಿಜಯಪುರ ನಡುವೆ ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗಗಳಲ್ಲಿ ರೈಲು ಓಡಿಸಲು ಯಾವುದೇ ತೊಂದರೆ ಇಲ್ಲ. ಆದರೆ ಈಗ ಚಾಲ್ತಿಯಲ್ಲಿರುವ ರೈಲುಗಳ ಮಾರ್ಗವನ್ನು ಬದಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೇ ಮಂಡಳಿಯಿಂದ ಹೊಸ ರೈಲುಗಳನ್ನು ಮಂಜೂರು ಮಾಡಿಸಿಕೊಳ್ಳಬೇಕು
ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿಸೆಂಬರ್ 17ರಿಂದ ಸಾಕ್ಷಿಗಳ ವಿಚಾರಣೆಗೆ ನಿರ್ಧಾರ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಯನ್ನು ಡಿಸೆಂಬರ್ 17ರಿಂದ ನಡೆಸಲು ನ್ಯಾಯಾಲಯ ನಿರ್ಧರಿಸಿದೆ. ನಟ ದರ್ಶನ್ ನಟಿ ಪವಿತ್ರಾ ಗೌಡ ಸೇರಿದಂತೆ ಹಲವರು ಆರೋಪಿಗಳು ಪೊಲೀಸರು ದಾಖಲಿಸಿದ ದೋಷಾರೋಪಗಳನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಡಿಸೆಂಬರ್ 17ರಿಂದ ಸಾಕ್ಷ್ಯಗಳ ವಿಚಾರಣೆ ನಡೆಸಲು
ಸಂಚಾರಿ ಸಾಥಿ ಆಪ್ ಮೊಬೈಲ್ ನಲ್ಲಿ ಪೂರ್ವಾನುಷ್ಠಾನ ಕಡ್ಡಾಯ ಆದೇಶ ವಾಪಸ್ ಪಡೆದ ಕೇಂದ್ರ!
ನವದೆಹಲಿ: ಸ್ಮಾರ್ಟ್ ಫೋನ್ ಗಳು ಸಿದ್ಧಪಡಿಸುವಾಗಲೇ ಸಂಚಾರ್ ಸಾಥಿ ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್ ಅನುಷ್ಠಾನ ಕಡ್ಡಾಯಗೊಳಿಸಿದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಸಂಚಾರಿ ಆಪ್ ಸುರಕ್ಷತೆ ದೃಷ್ಟಿಯಿಂದಲೋ ಅಥವಾ ಗುಪ್ತಚಾರಿಕೆ ನಡೆಸಲೋ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ




