kannada news
ಬಿಜೆಪಿ ಶಾಸಕ ಬೈರತಿ ಬಸವರಾಜು ವಿರುದ್ಧ ಲುಕೌಟ್ ನೋಟಿಸ್ ಜಾರಿ
ಬೆಂಗಳೂರು: ರೌಡ ಬಿಕ್ಕು ಶಿವು ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿದ್ದು, ಅಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ 3 ತಂಡಗಳು ಅವರಿಗಾಗಿ ಎರಡು ಮೂರು ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ. ಈ ಮಧ್ಯೆ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ
ಪ್ರಿಯಕರ ಅಪ್ಪನ ಕೊಲೆ ಮಾಡುತ್ತಿದ್ದರೆ ನೋಡುತ್ತಿದ್ದ 17 ವರ್ಷದ ಮಗಳು!
ಪ್ರೀತಿಗೆ ಒಪ್ಪದ ತಂದೆಗೆ ಡ್ರಗ್ಸ್ ನೀಡಿ ಮೈಮೇಲೆ ಎಚ್ಚರ ಇಲ್ಲದಂತೆ ಮಾಡಿದ ಮಗಳು ಪ್ರಿಯಕರ ಕೊಲೆ ಮಾಡಲು ಹೇಳಿ ನೋಡುತ್ತಾ ನಿಂತ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ನ ವಡೋದರಾದ ಪದ್ರಾ ಗ್ರಾಮದಲ್ಲಿ 17ರ ಹುಡುಗಿ ಗೆಳೆಯನ ಜೊತೆ ಸೇರಿ
ದಿನದಲ್ಲಿ ಎರಡು ಗಂಟೆ ಡಿಜಿಟಲ್ ಆಫ್: ಗಮನ ಸೆಳೆದ ಹಲಗಾ ಗ್ರಾಮ
ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಬೆಳಗಾವಿ ತಾಲೂಕಿನ ಹಲಗಾ ಗ್ರಾಮಸ್ಥರು ಒಂದು ಕ್ರಾಂತಿಕಾರಿ ಮತ್ತು ಮಾದರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ ‘ಡಿಜಿಟಲ್ ಆಫ್’ ಪ್ರಯೋಗ. ಎಲ್ಲರೂ ಮೊಬೈಲ್ ಮತ್ತು ಟಿವಿ ಸೇರಿದಂತೆ ಡಿಜಿಟಲ್ ವ್ಯಸನಕ್ಕೆ ಒಳಗಾಗಿದ್ದು, ಮಕ್ಕಳ ಓದಿನ ಮೇಲೆ ಮತ್ತು
ಚಾಮರಾಜನಗರದಲ್ಲಿ ಒಂದೇ ಕಡೆ 5 ಹುಲಿಗಳು ಪತ್ತೆ: ನಿಷೇಧಾಜ್ಞೆ ಜಾರಿ
ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನು ಗಳಲ್ಲಿ ಹುಲಿಗಳು ಓಡಾಡುತ್ತಿರುವುದು ಡ್ರೋನ್ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸ್ಥಳೀಯರಲ್ಲಿ ಭೀತಿ ಆವರಿಸಿಕೊಂಡಿದೆ. ಹೀಗಾಗಿ ಈ
ಖಜಾನೆ ತುಂಬಿಸಲು ಸರ್ಕಾರದಿಂದ 569 ಮದ್ಯ ಲೈಸೆನ್ಸ್ ಇ- ಹರಾಜು
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಆಯೋಗ ಇತ್ತೀಚೆಗೆ ಮನವಿ ಮಾಡಿದೆ, ಇದೀಗ ಸರ್ಕಾರ ರಾಜ್ಯದ 569 ವೈನ್ ಸ್ಟೋರ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ಲೈಸೆನ್ಸ್ ಇ-ಹರಾಜಿಗೆ ಮುಂದಾಗಿದೆ. ಮದ್ಯ ಮಾರಾಟ ಇಳಿಕೆಯಾಗಿದ್ದು, ಸಂಪನ್ಮೂಲ ಕ್ರೋಢೀಕರಣಕ್ಕೆ
ಕಿಚ್ಚ ಸುದೀಪ್ ಅಭಿಮಾನಿಗೆ ಎಟಿಎಸ್ ಹೆಸರಲ್ಲಿ ಬೆದರಿಸಿ ಹಣ ದೋಚಿದ ಸೈಬರ್ ವಂಚಕರು
ಸೈಬರ್ ವಂಚಕರು ಕಿಚ್ಚ ಸುದೀಪ್ ಅಭಿಮಾನಿಯೊಬ್ಬರಿಗೆ ATS (ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಬಳಕೆಯಾಗಿದೆ ಎಂದು
ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಈ ಬಾರಿ ಫೆ. 24ರಿಂದ ಮಾ. 4ರವರೆಗೆ
ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಈ ಬಾರಿ ಫೆ. 24ರಿಂದ ಮಾ. 4ರವರೆಗೆ ಒಂಬತ್ತು ದಿನ ನಡೆಯಲಿದೆ. ಫೆ.24 ರಂದು ದೇವಿಯ ರಥದ ಕಲಶ ಪ್ರತಿಷ್ಠೆ ಮತ್ತು ಜಾತ್ರಾ ಕಲ್ಯಾಣ ಪ್ರತಿಷ್ಠೆ, ಫೆ.25 ರಂದು ಬೆಳಗ್ಗೆ 7.27ಕ್ಕೆ
ಅನೈತಿಕ ಸಂಬಂಧ ಬೇಡವೆಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದ ಮಹಿಳೆ
ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಅನೈತಿಕ ಸಂಬಂಧ ಮುಂದುವರಿಸುವುದು ಡವೆಂದ ಯುವಕನ ಮೇಲೆ ಮಹಿಳೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾರ್ತಿಕ್ ಎಂಬ ಯುವಕ ದೀಪಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮನೆಯವರ ಬುದ್ಧಿವಾದದ ಬಳಿಕ ಆಕೆಯ ಸಹವಾಸ ತೊರೆದಿದ್ದ.
ಜಾತ್ರೆ ವೇಳೆ ಕೋಳಿ ಅಂಕ ನಡೆಸುತ್ತಿದ್ದ 27 ಬಿಜೆಪಿ ಮುಖಂಡರ ವಿರುದ್ಧ ಕೇಸ್
ಜಾತ್ರೆ ವೇಳೆ ಸಾಂಪ್ರದಾಯಿಕ ಕೋಳಿ ಅಂಕ (ಜೂಜು) ನಡೆಸುತ್ತಿದ್ದ 25 ಬಿಜೆಪಿ ಮುಖಂಡರು ಸೇರಿದಂತೆ ಹಲವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿ ವಿಟ್ಲದಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಸಮೀಪ ಕೇಪು ಎಂಬಲ್ಲಿ ಕೋಳಿ ಅಂಕ ನಡೆಸುವ ವಿಚಾರದಲ್ಲಿ ಸ್ಥಳಕ್ಕೆ
ಮೈಸೂರಿಗೆ ಸಿಎಂ ಭೇಟಿ ನಡುವೆ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಭೇಟಿ ನೀಡಿರುವ ಸಂದರ್ಭದಲ್ಲೇ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿರುವುದು ಆತಂಕ ಸೃಷ್ಟಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಗೂರು ತಾಲೂಕು ಕಚೇರಿಗೆ ಆರ್ಡಿಎಕ್ಸ್ ಬಾಂಬ್




