kannada movie
ನಿರ್ದೇಶಕನಾಗಬೇಕಾದರೆ ಬರವಣಿಗೆ ಮೇಲೆ ಹಿಡಿತವಿರಬೇಕು: ಪಿ.ಶೇಷಾದ್ರಿ
ಬೆಂಗಳೂರು: ಚಲನಚಿತ್ರ ನಿರ್ದೇಶಕನಾಗಬೇಕು ಎಂದುಕೊಂಡವರು ಬರವಣಿಗೆಯನ್ನು ಸಿದ್ಧಿಸಿಕೊಂಡಿರಬೇಕು ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಹಮ್ಮಿಕೊಂಡಿದ್ದ ‘ಮೀಡಿಯಾ ಕ್ರಾಫ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಾಧ್ಯಮ ಕ್ಷೇತ್ರ ಬಹಳಷ್ಟು ವಿಸ್ತಾರವಾಗಿದೆ. 20 ವರ್ಷಗಳ ಹಿಂದೆ ಒಂದೇ ಟಿವಿ ಚಾನೆಲ್, ಒಂದೆರಡು ಪತ್ರಿಕೆಗಳು ಇದ್ದವು. ಆದರೆ ಇಂದು ಹತ್ತಾರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಇವೆ ಎಂದರು. ಮೊದಲೆಲ್ಲ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ