Kannada artist Umesh
ಕನ್ನಡದ ಹಿರಿಯ ಕಲಾವಿದ ಉಮೇಶ್ ಇನ್ನಿಲ್ಲ
ರಂಗಭೂಮಿ ಹಾಗೂ ಸಿನಿಮಾದ ಹಿರಿಯ ಕಲಾವಿದರಾದ ಎಂ.ಎಸ್.ಉಮೇಶ್ ಅವರು ಇಂದು ಬೆಳಿಗ್ಗೆ ನಿಧನರಾದರು. ಅನಾರೋಗ್ಯದಿಂದಾಗಿ ಹಲವು ದಿನಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಮೈಸೂರಿನಲ್ಲಿ 1945ರ ಏಪ್ರಿಲ್ 22ರಲ್ಲಿ ಜನಿಸಿದರು. 4ನೇ ವರ್ಷದಲ್ಲೇ ಹಿರಣ್ಣಯ್ಯರ ನಾಟಕ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದ ಉಮೇಶ್ ಅವರು ಗುಬ್ಬಿ ವೀರಣ್ಣರ ಕಂಪನಿಯಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದರು. 1960ರಲ್ಲಿ ಬಿಆರ್ ಪಂಥುಲು ನಿರ್ದೇಶನದ ʻಮಕ್ಕಳ ರಾಜ್ಯʼ ಸಿನಿಮಾ ಮೂಲಕ ಚಿತ್ರರಂಗ


