Menu

ಉದ್ಯಮಕ್ಕೆಂದು ಪಡೆದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್‌ಗೆ ಮಾರಿದ ಇನ್ಫೋಸಿಸ್‌ ?

ಉದ್ಯಮಕ್ಕಾಗಿ ಕೆಐಎಡಿಬಿಯಿಂದ ಭೂಮಿ ಪಡೆದು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಭೂಮಿ ಮಾರಿದ ಆರೋಪ ಹೊಂದಿರುವ ಇನ್ಫೋಸಿಸ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆನೇಕಲ್‌ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆ ಇನ್ಫೋಸಿಸ್‌ಗೆ 53.5 ಎಕರೆ ಭೂಮಿ ಮಂಜೂರು ಮಾಡಿದ್ದು, ಅದನ್ನು ಇನ್ಫೋಸಿಸ್‌ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರೂಪಾಯಿಗೆ ಮಾರಿದ ಆರೋಪ ಕೇಳಿ ಬಂದಿದೆ. ಅತ್ತಿಬೆಲೆ ಹೋಬಳಿಯಲ್ಲಿರುವ ಈ ಭೂಮಿಯ ಒಟ್ಟು ಅಭಿವೃದ್ಧಿ ಮೌಲ್ಯ