Menu

ಸುಹಾಸ್‌ ಹತ್ಯೆಯಲ್ಲಿ ಹೆಡ್ ಕಾನ್ಸ್‌ಟೇಬಲ್‌ ಕೈವಾಡ ಶಂಕೆ, ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಸ್ಲಿಂ ಹೆಡ್ ಕಾನ್ಸ್‌ಟೇಬಲ್‌ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ. ಸೇಡಿಗಾಗಿ ಫಾಝಿಲ್ ತಮ್ಮ ಆದಿಲ್ ಮೆಹರೂಫ್ ಸುಫಾರಿ ಕೊಟ್ಟು ಹತ್ಯೆ ನಡೆಸಿದ್ದಾನೆಂದು ಆರೋಪಿಗಳ ಬಂಧನ ವೇಳೆ ಸುದ್ದಿ ಕೇಳಿ ಬಂದಿತ್ತು. ಬಳಿಕ ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಭಾಗಿಯಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಈಗ ಹತ್ಯೆಯಲ್ಲಿ ಪೊಲೀಸ್‌ ಕೈ ಜೋಡಿಸಿರುವ ಮಾಹಿತಿ ಹೊರಬಂದಿದೆ.