baby save
ಹೇರ್ ಪಿನ್ ನುಂಗಿದ ಆರು ತಿಂಗಳ ಮಗುವಿನ ಜೀವವುಳಿಸಿದ ವೈದ್ಯ
ಯಾದಗಿರಿಯಲ್ಲಿ ಹೇರ್ ಪಿನ್ ಹಿಡಿದುಕೊಂಡು ಆಟವಾಡುತ್ತಿದ್ದ ಮಗು ಅದನ್ನು ನುಂಗಿ ಪೋಷಕರಲ್ಲಿ ಆತಂಕವುಂಟು ಮಾಡಿತ್ತು, ರಾಯಚೂರಿನ ಖಾಸಗಿ ಆಸ್ಪತ್ರೆಗೆ ಕರೆ ತಂದಾಗ, ಸ್ಕ್ಯಾನಿಂಗ್ ಮಾಡಿದ್ದು ಮಗುವಿನ ಹೊಟ್ಟೆಯಲ್ಲಿ ಹೇರ್ ಪಿನ್ ಇರುವುದು ಪತ್ತೆಯಾಗಿದೆ. ಮಗುವಿನ ಕರುಳು ಡ್ಯಾಮೇಜ್ ಆಗದಂತೆ ಎಂಡೊಸ್ಕೋಪಿ ಸಹಾಯದಿಂದ ಡಾ ವಿಶ್ವನಾಥ ರೆಡ್ಡಿ ಹೇರ್ ಪಿನ್ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೇವರ ರೂಪದಲ್ಲಿ ಮಗುವಿನ ಡಾ ವಿಶ್ವನಾಥ ರೆಡ್ಡಿ ಮಗುವಿನ ಜೀವ ಉಳಿಸಿರುವುದಾಗಿ ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.