Menu

ಚಾಲಕನ ತಪ್ಪಿಗೆ ಕ್ಷಮೆ ಕೇಳಿದ ‘ನಮ್ಮ ಯಾತ್ರಿ ಆ್ಯಪ್’

‘ನಮ್ಮ ಯಾತ್ರಿ ಆ್ಯಪ್’ ಆಟೋ ಚಾಲಕ ಪ್ರಯಾಣಿಕ ಮಹಿಳೆಯನ್ನು ನಿಗದಿತ ಜಾಗದ ಬದಲು ಬೇರೆ ಕಡೆ ಕರೆದೊಯುವಾಗ ಆಕೆ ಆಟೊದಿಂದ ಜಿಗಿದು ಅಪಾಯದಿಂದ ಪಾರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಮ್ಮ ಯಾತ್ರಿ ಆ್ಯಪ್’ ಕ್ಷಮೆ ಯಾಚಿಸಿದೆ. ಗುರುವಾರ ರಾತ್ರಿ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಈ ಘಟನೆ ನಡೆದಿತ್ತು. ಪ್ರಯಾಣಿಕ ಮಹಿಳೆಯ ಪತಿ ಅಜಾರ್ ಖಾನ್ ‘ಎಕ್ಸ್’ ಖಾತೆಯಲ್ಲಿ ಘಟನೆ ಕುರಿತು ಬರೆದು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಪಾನಮತ್ತ ಆಟೋ ಚಾಲಕ