Airstrike Gaza
ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ: 24 ಪ್ಯಾಲೆಸ್ತೀನಿಯರು ಬಲಿ
ಇಸ್ರೇಲ್ ಗಾಜಾದ ಮೇಲೆ ಮತ್ತೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 24 ಪ್ಯಾಲೆಸ್ತೀನಿಯರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಎರಡು ವರ್ಷಗಳ ಯುದ್ಧದ ನಂತರ ಅಕ್ಟೋಬರ್ 10 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸಿ, ದಕ್ಷಿಣ ಗಾಜಾದಲ್ಲಿ ತನ್ನ ಸೈನಿಕರ ಮೇಲೆ ಹಮಾಸ್ ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.


