Menu

ಕತ್ತಲಲ್ಲಿ ರಸ್ತೆ ಮಧ್ಯೆ ಇಳಿದ ಭಾರತೀಯ ಯುದ್ಧವಿಮಾನಗಳು: ವಾಯುಪಡೆಯಿಂದ ಭರ್ಜರಿ ಪ್ರಯೋಗ

ಲಕ್ನೋ: ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ರಾಫೆಲ್ ಮತ್ತು ಸುಖೋಯ್ ಯುದ್ಧ ವಿಮಾನಗಳನ್ನು ಕತ್ತಲಲ್ಲಿ ಲ್ಯಾಂಡಿಂಗ್ ಮಾಡುವ ಯಶಸ್ವಿ ತರಬೇತಿ ನಡೆಸಿದೆ. ಉತ್ತರ ಪ್ರದೇಶದ ಶಹಜಾನ್ ಪುರದ ಎಕ್ಸ್ ಪ್ರೆಸ್ ವೇನಲ್ಲಿ ಶುಕ್ರವಾರ ರಾತ್ರಿ ಚಂದಿರನ ಬೆಳಕು ಹೊರತುಪಡಿಸಿ ಯಾವುದೇ ಬೆಳಕಿನ ಸಹಾಯವಿಲ್ಲದೇ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಲಾಯಿತು. ಈ ಮೂಲಕ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿ ಎಚ್ಚರಿಕೆ ಸಂದೇಶ ರವಾನಿಸಿದೆ.