Aero India Show
ಇಂದಿನಿಂದ ಬೆಂಗಳೂರಿನಲ್ಲಿ 5 ದಿನ ಏರೋ ಇಂಡಿಯಾ ಶೋ
ಬೆಂಗಳೂರಿನ ಯಲಹಂಕದ ವಾಯುಪಡೆ ನೆಲೆಯಲ್ಲಿ ಇಂದಿನಿಂದ (ಸೋಮವಾರ) ಐದು ದಿನಗಳ ಏರೋ ಇಂಡಿಯಾ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ಹಲವಾರು ಯುದ್ಧವಿಮಾನಗಳು ಸಾಮರ್ಥ್ಯ ಪ್ರದರ್ಶಿಸಲಿವೆ. 90 ದೇಶಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿದ್ದು, 70 ಯುದ್ಧ ವಿಮಾನ, ಸರಕು, ತರಬೇತಿ ವಿಮಾನಗಳು ಕಾರ್ಯಾಚರಣೆ ಮಾದರಿಯ ಪ್ರದರ್ಶನ ನೀಡಲಿವೆ. 30 ವಿಮಾನಗಳು, ಹೆಲಿಕಾಪ್ಟರ್‌ಗಳು ಪ್ರದರ್ಶನಗೊಳ್ಳಲಿವೆ. 750 ಭಾರತದ ಕಂಪನಿಗಳು