addict death
ಪಬ್‌ಜಿ ಆಡುತ್ತಿದ್ದವನಿಗೆ ರಕ್ತದೊತ್ತಡ ಹೆಚ್ಚಿ ಕುಸಿದು ಸಾವು
ಪಬ್‌ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೊಹಮ್ಮದ್ ಕೈಫ್ (22) ಮೃತಪಟ್ಟವ. ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಎಂಬವರ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದ. ತಡರಾತ್ರಿಯವರೆಗೂ ಪಬ್‌ಜಿ ಗೇಮ್ ಆಡುತ್ತಿದ್ದ. ಸುಮಾರು ರಾತ್ರಿ ಮೂರು ಗಂಟೆ ವೇಳೆಗೆ ಪಬ್‌ಜಿ ಆಡುತ್ತಿರುವಾಗ ಕೈಫ್ ಕುಸಿದು ಬಿದ್ದಿದ್ದಾನೆ. ಶಬ್ದ ಕೇಳಿ ಮನೆಯವರು


