Menu

ನಟಿ ನಂದಿನಿ ಆತ್ಮಹತ್ಯೆ: ಮಾನಸಿಕ ನೋವು, ಗೊಂದಲ ಬಿಚ್ಚಿಟ್ಟ ಡೈರಿ

ಬೆಂಗಳೂರಿನ ಆರ್.ಆರ್. ನಗರದಲ್ಲಿ ಸೋಮವಾರ ಕಿರುತೆರೆ ನಟಿ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಸಾವಿನ ಕಾರಣ ಬಯಲಾಗಿದೆ. ಕೆಂಗೇರಿ ಪೊಲೀಸರು ಡೈರಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ನಂದಿನಿ ಮನಸ್ಸಿನ ನೋವು, ಜೀವನದ ಬಗ್ಗೆ ಹೊಂದಿದ್ದ ಗೊಂದಲಗಳ ಬಗ್ಗೆ ಬರೆದುಕೊಂಡಿದ್ದಾರೆ. ನನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ. ನನಗೆ ಆಕ್ಟಿಂಗ್ ತುಂಬಾ ಇಷ್ಟ. ನನ್ನ ಮನಸ್ಸಿಗೆ ಇಷ್ಟವಿಲ್ಲದ ಬದುಕನ್ನು ಬದುಕಲು ಆಗುತ್ತಿಲ್ಲ. ಅದಕ್ಕಾಗಿ