Wednesday, November 19, 2025
Menu

ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಡಾ.ರಾಜ್

ಡಾ.ರಾಜ್ ಕುಮಾರ್ ಎಂಬ ಹೆಸರು ಕೇಳಿದರೆ ಸಾಕು ಮೈಮನ ರೋಮಾಂಚನಗೊಳ್ಳುತ್ತವೆ! ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್‌ರವರ ಬಹುಮುಖ ಪ್ರತಿಭೆಗೆ ಸಾಟಿ ಇಲ್ಲ. ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಕೂಡ ನಟಿಸದೆ, ತಮ್ಮ ಕನ್ನಡಾಭಿಮಾನವನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಂಡು ಬಿಟ್ಟಿದ್ದರು. ಇದರಿಂದಾಗಿ ಎಲ್ಲರಿಗೂ ಮಾದರಿಯಾದರು. ತನು ಕನ್ನಡ, ಮನ ಕನ್ನಡ- ಎನ್ನುವಂತೆ ಅವರ ಬದುಕಿನುದ್ದಕ್ಕೂ