Menu

ಬೆಂಗಳೂರಲ್ಲಿ ಹೋಟೆಲ್‌ ಮಾಲೀಕನಿಂದ ಮಾಮೂಲಿ ವಸೂಲಿ: ಎಸಿಪಿ ಲೋಕಾಯುಕ್ತ ಬಲೆಗೆ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸಾಗರ್ ಹೋಟೆಲ್ ಮಾಲೀಕರಿಗೆ ಪ್ರತಿ ತಿಂಗಳು ಹಣ ನೀಡುವಂತೆ ಪೀಡಿಸುತ್ತಿದ್ದ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೋಟೆಲ್ ಸುಗಮವಾಗಿ ನಡೆಯಬೇಕೆಂದರೆ ತಿಂಗಳಿಗೆ 32 ಸಾವಿರ ರೂಪಾಯಿ ‘ಮಾಮೂಲಿ’ ನೀಡಬೇಕು ಎಂದು ಎಸಿಪಿ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಎಸಿಪಿ ಮತ್ತು ಹೋಟೆಲ್ ಮಾಲೀಕರ ನಡುವೆ ನಡೆದ ಸಂಭಾಷಣೆಯ ಆಡಿಯೋ ತುಣುಕು ಲಭ್ಯವಾಗಿತ್ತು. ಲಂಚ ನೀಡಲು ಇಚ್ಛಿಸದ