Accused arrest
ಅಯೋಧ್ಯೆ ರಾಮಜನ್ಮಭೂಮಿ ಗೆಸ್ಟ್ ಹೌಸ್‌ನಲ್ಲಿ ಸೆಕ್ಸ್ ದಂಧೆ: 14 ಮಂದಿ ಅರೆಸ್ಟ್
ಅಯೋಧ್ಯೆ ರಾಮ ಜನ್ಮಭೂಮಿಯ ಗೆಸ್ಟ್ಹೌಸ್ನಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನು ಪೊಲೀಸರು ಭೇದಿಸಿದ್ದು, 11 ಮಹಿಳೆಯರು ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತಿಥಿ ಗೃಹದ ಮಾಲೀಕ ಗಣೇಶ್ ಅಗರ್ವಾಲ್ ಮತ್ತು ಅವರ ಇಬ್ಬರು ಸಹಚರರನ್ನು ಕೂಡ ಬಂಧಿಸಿರುವುದಾಗಿ ಪೊಲೀಸ್ ವೃತ್ತ ಅಧಿಕಾರಿ ಶೈಲೇಂದ್ರ ಸಿಂಗ್ ಹೇಳಿದ್ದಾರೆ. ದಾಳಿ ವೇಳೆ ಮಹಿಳೆಯರು ಓಡಿಹೋಗಲು ಪ್ರಯತ್ನಿಸಿದರು. ಹೊರಗೆ ನಿಯೋಜಿಸಲಾದ ಮಹಿಳಾ ಪೊಲೀಸ್ ಅವರನ್ನು ತಡೆದು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು
ಮದ್ದೂರಿನಲ್ಲಿ ಅಶ್ಲೀಲವಾಗಿ ತಂದೆಯ ಪೋಟೊ ಎಡಿಟ್ ಮಾಡಿ ಪೋಸ್ಟ್ ಮಾಡಿದ ಮಗ ಪೊಲೀಸ್ ಅತಿಥಿ
ಮಂಡ್ಯದ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗನೊಬ್ಬ ಇನ್ನಷ್ಟು ಆಸ್ತಿ ಪಡೆದುಕೊಳ್ಳುವುದಕ್ಕಾಗಿ ತಂದೆಗೆ ಬ್ಲ್ಯಾಕ್ಮೇಲ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಗನ ವಿರುದ್ಧ ತಂದೆ ದೂರು ನೀಡಿದ್ದು, ಬೆದರಿಕೆ ಹಾಕಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್ ಎಂಬವರು ರಾಣಿ ಐಶ್ವರ್ಯ
ಮೈಸೂರಲ್ಲಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 1.5 ಲಕ್ಷ ವಸೂಲಿ ಮಾಡಿದ್ದಾತ ಸೆರೆ
ಹುಣಸೂರು ನಗರದ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿ 1.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದ ವೀರೇಶ್ ಕುಮಾರ್ 28 ಬಂಧಿತ ಆರೋಪಿ. ಆರೋಪಿಯು ವಾಟ್ಸಪ್ ಮೂಲಕ ಪರಿಚಯವಾಗಿದ್ದ
ದಾಂಡೇಲಿಯಲ್ಲಿ ನಕಲಿ ನೋಟು: ಆರೋಪಿ ಲಕ್ನೋದಲ್ಲಿ ಸೆರೆ
ಕಾರವಾರದ ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ಕಂತೆ ಕಂತೆ ನಕಲಿ ಕರೆನ್ಸಿ ನೋಟುಗಳು ಪತ್ತೆಯಾದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಲಕ್ನೋದಲ್ಲಿ ಪೊಲೀಸರು ಬಂಧಿಸಿದ್ದಾರೆ. ಗೋವಾ,ಹೈದರಾಬಾದ್ ಎಂದು ಪೊಲೀಸರನ್ನು ಯಾಮಾರಿಸಿದ್ದ ಆರೋಪಿ ಅರ್ಷದ್ ಅಂಜುಂ ಖಾನ್‌ನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿ
ಚಿನ್ನ ದರೋಡೆ ಪ್ರಕರಣದಲ್ಲಿ ಕೆಜಿಎಫ್ ನಗರಸಭೆ ಸದಸ್ಯ ಅರೆಸ್ಟ್
ಚಿನ್ನ ದರೋಡೆ ಪ್ರಕರಣದಲ್ಲಿ ಕೆಜಿಎಫ್ ನಗರಸಭೆ ಸದಸ್ಯ, ಕೆಜಿಎಫ್ ಕಾಂಗ್ರೆಸ್ ಮುಖಂಡ ಜಯಪಾಲ್ ಎಂಬವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈನಿಂದ ಕೆಜಿಎಫ್ಗೆ ಬರುತ್ತಿದ್ದ ಚಿನ್ನದ ವ್ಯಾಪಾರಿ ಚೇತನ್ ಜೈನ್ ಎಂಬವರ ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನವನ್ನು ತಂಡವೊಂದು ಏಪ್ರಿಲ್
ಪಿಯುಸಿ, ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ ದಂಧೆ: ಮೂವರ ಬಂಧನ
ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಮೂಲಕ ಪಿಯುಸಿ ಮತ್ತು ಎಸ್ಎಸ್ಎಲ್ಸಿ ತತ್ಸಮಾನ ಎಂದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಟಡಿ ಸೆಂಟರ್ಗಳನ್ನು ತೆರೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು.
ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ ಕರೆದೊಯ್ದ ಆರೋಪಿಗಳ ಬಂಧನ
ರಾಜ್ಯದ ಗಡಿಭಾಗ ತಮಿಳುನಾಡಿಗೆ ಸೇರಿರುವ ಅಂಚೆಟ್ಟಿ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಿ, ಬಾಲಕಿ ಬರುವುದಿಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೊ ವೈರಲ್ ಆಗಿದ್ದು, ಆರೋಪಿಗಳು ಮದುವೆ ಮಾಡಿ ಬಾಲಕಿ
ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಕ ಬಾಲಕಿ, ಆರೋಪಿಯ ಬಂಧನ
ಯಲ್ಲಾಪುರದ ಮೂಲದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ದುರ್ಗಪ್ಪ ಭೋವಿ (20)ಯನ್ನು ಮುಂಡಗೋಡ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ ಮುಂಡಗೋಡ ತಾಲೂಕಿನ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು. ಈ
ಹಾಸನ ರೈಲು ನಿಲ್ದಾಣದಲ್ಲಿ ಅಪರಿಚಿತೆಯ ಅತ್ಯಾಚಾರ, ಕೊಲೆ ಆರೋಪಿ ಸೆರೆ
ಹಾಸನದ ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಅತ್ಯಾಚಾರ ನಡೆಸಿ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ನೇಪಾಳಿ ಕೂಲಿಕಾರ್ಮಿಕನನ್ನು ಅರಸೀಕೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಮೊರಾಂಗ್ ಜಿಲ್ಲೆಯ ಮೌಸಮ್ ಪಹಡಿ(25)ಬಂಧಿತ ಆರೋಪಿ. ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ
ಚಿನ್ನ ಕಳ್ಳಸಾಗಣೆ: ಐಪಿಎಸ್ ಅಧಿಕಾರಿಯ ಹತ್ತಿರದ ಸಂಬಂಧಿ ಪೊಲೀಸ್ ವಶ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಡಿಆರ್‌ಐ (ಡೈರೆಕ್ಟೊರೇಟ್ ಆಪ್ ರೆವಿನ್ಯು ಇಂಟೆಲಿಜೆನ್ಸ್) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ ಮೂಲಕ ಚಿನ್ನ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಹತ್ತಿರದ




