Menu

ದುರ್ಗಾ ವಿಸರ್ಜನೆ: ಟ್ರ್ಯಾಕ್ಟರ್‌ ಉರುಳಿ 12 ಮಂದಿ ಸಾವು, ಕೆಲವರು ನಾಪತ್ತೆ

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪಂಧಾನ ಪ್ರದೇಶದಲ್ಲಿ ದುರ್ಗಾ ಪೂಜೆಯ ಬಳಿಕ ಮೂರ್ತಿಯನ್ನು ವಿಸರ್ಜಿಸಲು ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ‍್ಯಾಕ್ಟರ್ ಟ್ರಾಲಿ ಉರುಳಿ ಕೊಳಕ್ಕೆ ಬಿದ್ದು ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಯುವತಿಯರು. ಅರ್ದ್ಲಾ ಮತ್ತು ಜಮ್ಲಿ ಗ್ರಾಮಗಳಿಂದ 20-25 ದುರ್ಗಾ ಭಕ್ತರು ದೇವಿಯ ಮೂರ್ತಿಯನ್ನು ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಕೊಳದ ಹತ್ತಿರ ನಿಲ್ಲಿಸಿದ್ದ ಟ್ರ‍್ಯಾಕ್ಟರ್ ಸಮತೋಲನ ತಪ್ಪಿ ನೀರಿಗೆ ಬಿದ್ದ ಪರಿಣಾಮವಾಗಿ ಈ ಅವಘಡ ನಡೆದಿದೆ. . ಸ್ಥಳೀಯ ಪೊಲೀಸ್

ಹಾಸನದ ಮನೆಯಲ್ಲಿ ಸ್ಫೋಟದಿಂದ ಗಾಯಗೊಂಡಿದ್ದ ದಂಪತಿ ಸಾವು

ಹಾಸನದ ಹಳೇಆಲೂರು ಪಟ್ಟಣದ ಮನೆಯೊಂದರಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುದರ್ಶನ್ (32), ಕಾವ್ಯ (27) ಮೃತಪಟ್ಟ ದಂಪತಿ. ಘಟನೆಯಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಸೋಮವಾರ ರಾತ್ರಿ ಹಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಬಳಿಕ

ಶಿರಾದಲ್ಲಿ ರಸ್ತೆ ಅಪಘಾತ: ಮೂವರು ಬಲಿ

ತುಮಕೂರಿನ ಜಿಲ್ಲೆ ಶಿರಾ ನಗರದ ಹೊರವಲಯದ ಸಾಯಿ ಡಾಬ ಬಳಿ ಭಾನುವಾರ ರಾತ್ರಿ ಎರಡು ಬೈಕ್‌ಗಳು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ರಾಮನಗರಜಿಲ್ಲೆಯ ಕೊಳಗೊಂಡನಹಳ್ಳಿ ಗ್ರಾಮದ ಮುತ್ತುರಾಜ್ (36) ಮತ್ತು ವೆಂಕಟಧನಶೆಟ್ಟಿ (64), ಎಮ್ಮೇರಹಳ್ಳಿ ತಾಂಡದ ವಿಷ್ಣು ಎನ್. ನಾಯ್ಕ್(24) ಮೃತಪಟ್ಟವರು.

ಬೀಳಗಿಯಲ್ಲಿ ಕಾರು ಟಂಟಂ ಡಿಕ್ಕಿ: ಇಬ್ಬರ ಸಾವು

ಬಾಗಲಕೋಟೆ ಜಿಲ್ಲೆಯ ಬೀಳಗಿ ಅನಗವಾಡಿ ಬ್ರಿಡ್ಜ್ ಬಳಿ ಕಾರು ಮತ್ತು ಟಂಟಂ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್‌ (30) ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸರು

ಬಾದಾಮಿಯಲ್ಲಿ ರಸ್ತೆ ಅಪಘಾತ: ಮೂವರ ಸಾವು

ಹುಬ್ಬಳ್ಳಿ- ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾದಾಮಿ ತಾಲೂಕಿನ ಹೂಲಗೇರಿ ಬಳಿ ಕ್ಯಾಂಟರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಹುಲ್ಲಿಕೇರಿ ಗ್ರಾಮದ ಇಬ್ಬರು, ನಂದಿಕೇಶ್ವರದ ಓರ್ವ ಸಾವನ್ನಪ್ಪಿರುವುದು. ಇಬ್ಬರು ಟ್ರ್ಯಾಕ್ಟರ್ ನಲ್ಲಿದ್ದರು. ಇನ್ನೊಬ್ಬ ಕ್ಯಂಟರ್ ನಲ್ಲಿದ್ದ. ವೆಂಕಪ್ಪ ತೋಗುಣಸಿ(೫೫), ಗದ್ದೆಪ್ಪ

ಗದಗ ರಸ್ತೆ ಅಪಘಾತ: ಇಬ್ಬರು ಪೊಲೀಸ್‌ ಸೇರಿ ಮೂವರ ಸಾವು

ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಕಾರು ಮತ್ತು ಬಸ್‌ ಮಧ್ಯೆ ಭೀಕರ  ಅಪಘಾತ ಸಂಭವಿಸಿ ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಪೊಲೀಸ್​ ಕಾನ್ಸ್​ಟೇಬಲ್​ಗಳಾದ ಅರ್ಜುನ್ ನೆಲ್ಲೂರ(29) ಮತ್ತು ವೀರೇಶ್ ಉಪ್ಪಾರ(31) ಹಾಗೂ ಅರ್ಜುನ್ ಚಿಕ್ಕಪ್ಪ

Accident deaths- ದಕ್ಷಿಣಕನ್ನಡದಲ್ಲಿ ರಸ್ತೆ ಅಪಘಾತಕ್ಕೆ ಐವರು ಬಲಿ

ದಕ್ಷಿಣ ಕನ್ನಡದ ತಲಪಾಡಿ ಟೋಲ್ ಗೇಟ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್‌ನ ಐವರು ಪ್ರಾಣ ಕಳೆದುಕೊಂಡಿದ್ದಾರೆ.

Accident Deaths: ಹಿರೇಬಾಗೇವಾಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

ಬೆಳಗಾವಿ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳ ಮಠದ ಘಾಟ್‌ನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಿಂದ ಪುಣೆಗೆ ಸಂಚರಿಸುತ್ತಿದ್ದ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಈ ದುರಂತ ನಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿ 12 ಪ್ರಯಾಣಿಕರಿದ್ದರು. ದುರ್ಘಟನೆಯಲ್ಲಿ ಮಹಿಳೆ

ಹಾವೇರಿಯಲ್ಲಿ ಕಾರು ಅಪಘಾತಕ್ಕೆ 6 ಮಂದಿ ಬಲಿ

ಹಾವೇರಿಯ ಮೂಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತಗೊಂಡು ಆರು ಜನರು ಸ್ಥಳದಲ್ಲೇ ಅಸು ನೀಗಿದ್ದಾರೆ. ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೋಟೆಗುಡ್ಡದ ಬಳಿಯಲ್ಲಿ ಈ ದುರಂತ ಸಂಭವಿಸಿದ್ದು, ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಹರಿಹರ

ವಿಜಯಪುರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ಸಾವು

ವಿಜಯಪುರದ ಹೆಗಡಿಹಾಳ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಉತ್ನಾಳದ ಬೀರಪ್ಪ ಗೋಡೆಕರ್(30), ಹಣಮಂತ ಕಡ್ಲಿಮಟ್ಟಿ(25) ಮತ್ತು ಜುಮನಾಳ ಗ್ರಾಮದ ಯಮನಪ್ಪ ನಾಟೀಕಾರ್(19) ಮೃತಪಟ್ಟವರು. ಉಕ್ಕಲಿ ಗ್ರಾಮದಿಂದ ವಿಜಯಪುರಕ್ಕೆ ಕಾರು ತೆರಳುತ್ತಿದ್ದಾಗ