Menu

ಒಬ್ಬರ ಪ್ರಾಣಕ್ಕಾಗಿ ಏಳು ಲಕ್ಷ ನೀಡಿ ಪಡೆದ ಏರ್ ಆಂಬ್ಯುಲೆನ್ಸ್‌ ಅಪಘಾತದಲ್ಲಿ ಏಳು ಜನ ಸಾವು

ಜಾರ್ಖಂಡ್​​ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಒಂದು ಜೀವ ಉಳಿಸುವುದಕ್ಕಾಗಿ ಕುಟುಂಬ ಆಂಬ್ಯುಲೆನ್ಸ್​ಗೆ ಏಳು ಲಕ್ಷ ರೂ. ಪಾವತಿ ಮಾಡಿತ್ತು. ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲನ್ನೂ ಕೂಡ ಮಾಡಿತ್ತು ಎನ್ನಲಾಗಿದೆ. ಆದರೆ ಅದೇ ಆಂಬ್ಯುಲೆನ್ಸ್ ಅಪಘಾತಗೊಂಡು ಏಳು ಜನ ಅಸು ನೀಗುವಂತಾಗಿದೆ. ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಜಯ್ ಶಾ ಎಂಬವರ ದೇಹದ ಶೇ.65 ಭಾಗ ಸುಟ್ಟು ಹೋಗಿತ್ತು. ಚಿಕಿತ್ಸೆಗಾಗಿ ಅವರನ್ನು

ಜಮಖಂಡಿಯಲ್ಲಿ ಅಪಘಾತಕ್ಕೆ ಮಗು ಸೇರಿ ನಾಲ್ವರು ಬಲಿ

ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಟ್ಟೆ ಕೆರೆ ಸಮೀಪ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ತುಂಡಾಗಿ ಉರುಳಿಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು ಮನೀಷ್

ಮಂಡ್ಯದಲ್ಲಿ ಕೆಮಿಕಲ್ ಟ್ಯಾಂಕ್ ಸ್ಫೋಟಕ್ಕೆ ಇಬ್ಬರು ಕಾರ್ಮಿಕರು ಬಲಿ

ಮಂಡ್ಯದಲ್ಲಿ ಕಾರ್ಖಾನೆ ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಕಾರೆಕಟ್ಟೆ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಬಸರಾಳು ಸಮೀಪದ ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡಲಾಗುತ್ತಿತ್ತು.

ನೆಲಮಂಗಲದಲ್ಲಿ ಕಾರು ಬಸ್‌ ಡಿಕ್ಕಿ: ಐವರ ಸಾವು

ನೆಲಮಂಗಲ ಜಿಂದಾಲ್ ಬಳಿ ಕೆಎಸ್ಸಾರ್ಟಿಸಿ ಬಸ್​​ ಮತ್ತು ಕಾರು ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಸೇರಿ ಐವರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತುಮಕೂರು ಕಡೆಯಿಂದ ಬರುತ್ತಿದ್ದ ಕಾರು

ಥಣಿಸಂದ್ರದಲ್ಲಿ ಬೈಕ್‌ಗೆ ಶಾಲಾ ಬಸ್‌ ಡಿಕ್ಕಿ: ಪುಟ್ಟ ಮಕ್ಕಳಿಬ್ಬರ ಸಾವು

ಶಾಲಾ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಕ್ಕಳ ಮೇಲೆಯೇ ಬಸ್‌ ಚಲಿಸಿದ್ದರಿಂದ ಪುಟ್ಟ ಮಕ್ಕಳಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಥಣಿಸಂದ್ರದ ಪೊಲೀಸ್‌ ಕ್ವಾರ್ಟಸ್‌ ಬಳಿ ನಡೆದಿದೆ. ಯಾದಗಿರಿಯ ನಾಗನಗೌಡಸಿಎಆರ್​ನಲ್ಲಿ ಕಾನ್ಸ್​ಟೇಬಲ್​​ ಆಗಿದ್ದು, ಹಾಲು ತರಲೆಂದು ಮಕ್ಕಳನ್ನು ಕರೆದುಕೊಂಡು

ರೋಣದಲ್ಲಿ ರಸ್ತೆ ಅಪಘಾತಕ್ಕೆ ಮೂವರು ಮಹಿಳೆಯರು ಬಲಿ

ಗದಗದ ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತ ಹೊಸಮನಿ (48), ಮರಿಯಂಬೂ ಹುನಗುಂದ (55)

ಬೆಂಗಳೂರಿನಲ್ಲಿ ಕಾಲೇಜು ಬಸ್‌ ಡಿಕ್ಕಿಯಾಗಿ ತಾಯಿ, ಮಗು ಸಾವು

ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಅಸು ನೀಗಿರುವ ಘಟನೆ ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಸಂಗೀತಾ (37) ಮತ್ತು ಮಗ ಪಾರ್ಥ (8) ಮೃತಪಟ್ಟವರು. ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ

ತೀರ್ಥಹಳ್ಳಿಯಲ್ಲಿ ಬಸ್‌ ಕಾರು ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76)

ಚಿತ್ರದುರ್ಗದಲ್ಲಿ ಕಾರಿಗೆ ಲಾರಿ ಡಿಕ್ಕಿ: ಕೊಲ್ಲಾಪುರ ಡಿವೈಎಸ್ಪಿ ವೈಷ್ಣವಿ ತಾಯಿ, ಕಾರು ಚಾಲಕ ಸಾವು

ಪ್ರವಾಸ ಮುಗಿಸಿ ಮರಳುತ್ತಿದ್ದ ಕೊಲ್ಲಾಪುರ ಡಿವೈಎಸ್‌ಪಿ ವೈಷ್ಣವಿ ಹಾಗೂ ಕುಟಂಬಸ್ಥರ ಕಾರು ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ಲಾರಿಗೆ ಡಿಕ್ಕಿಯಾಗಿ ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಪೊಲೀಸ್ ಅಧಿಕಾರಿ ವೈಷ್ಣವಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ

ಶಬರಿಮಲೆಯಿಂದ ವಾಪಸಾಗುತ್ತಿದ್ದ ಕೊಪ್ಪಳದ ಮಾಲಾಧಾರಿಗಳು ತುಮಕೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ

ತುಮಕೂರು ಕೋರಾ ಸಮೀಪ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು,