Menu

ವಿಜ್ಞಾನ, ಅನ್ವೇಷಣೆ, ಮಾನವ ಸಂಪನ್ಮೂಲ, ವಿಫುಲ ಅವಕಾಶದ ಸುರಕ್ಷಿತ ಜಾಗ ಬೆಂಗಳೂರು: ಡಿಕೆ ಶಿವಕುಮಾರ್‌

“ಕರ್ನಾಟಕ ರಾಜ್ಯವು ಜ್ಞಾನ, ಸಹಕಾರ, ಚರ್ಚೆ ಮತ್ತು ಸಂಯೋಜನೆಗೆ ಮುಕ್ತ ಹಾಗೂ ಸೂಕ್ತ ಸ್ಥಳವಾಗಿದೆ. ನಮ್ಮ ಮೇಲೆ ವಿಶ್ವಾಸ ಇಟ್ಟು ಬಂದಿರುವುದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು. ಬೆಂಗಳೂರಿನ  ಖಾಸಗಿ ಹೋಟೆಲ್ ನಲ್ಲಿ ನಡೆದ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ ಅನ್ನು ಉದ್ದೇಶಿಸಿ  ಮಾತನಾಡಿದರು. “ನಿಮ್ಮ ಶ್ರಮ, ಜ್ಞಾನ ಕರ್ನಾಟಕದ ಬೆಳವಣಿಗೆಗೆ ಸಹಕಾರಿಯಾಗಬೇಕು. ನಾವು ನಿಮ್ಮ ‌ಮೇಲೆ ನಂಬಿಕೆಯನ್ನಿಟ್ಟಿದ್ದೇವೆ. ಯಾರ ಜ್ಞಾನವೂ‌ ಕೀಳಲ್ಲ ಹಾಗೂ ಮೇಲಲ್ಲ. ಉದಾಹರಣೆಗೆ