Menu

ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ ಏಳು ಜನ ಸಾವು

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ.

ಅತಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಕಾರಿನ ಮೇಲೆ ಬಿದ್ದಿದೆ. ಲಾರಿ ಮತ್ತು
ಮತ್ತು ಜಲ್ಲಿಕಲ್ಲುಗಳ ಅಡಿಯಲ್ಲಿ ಸಿಲುಕಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ 5 ಅಡಿ ಉದ್ದದ ಕಾರು 2 ಅಡಿ ಆಗಿ ಹೋಗಿದೆ.

ಕ್ರೇನ್‌ಗಳ ಮೂಲಕ ಲಾರಿಯನ್ನು ಬದಿಗೆ ಸರಿಸಿ ಸೇರಿದ್ದ ಜನ ಕಾರಿನ ಮೇಲೆ ಸುರಿದು ಬಿದ್ದಿದ್ದ ಜಲ್ಲಿಕಲ್ಲು ತೆಗೆಯುವುದಕ್ಕೆ ಗಂಟೆಗಟ್ಟಲೆ ಶ್ರಮಿಸಿದ್ದಾರೆ. ಕಾರಿನಲ್ಲಿದ್ದವರು ಒಳಗೆ ಸಿಲುಕಿಕೊಂಡು ನರಳಾಡುತ್ತಿದ್ದರು. ಒಳಗೆ ಸಿಲುಕಿದ್ದ ಜನರನ್ನು ರಕ್ಷಿಸಲು ಕಾರಿನ ಛಾವಣಿಯನ್ನೇ ಕತ್ತರಿಸಲಾಯಿತು.

ಬೆಳಗ್ಗೆ ಸಹರಾನ್‌ಪುರದ ಸಯ್ಯದ್ ಮಜ್ರಾ ಗ್ರಾಮದ ನಿವಾಸಿಗಳಾದ ಕುಟುಂಬವೊಂದು ಕಾರಿನಲ್ಲಿ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಗ್ರಾಮದ ಹೊರಗಿನ ಎಕ್ಸ್‌ಪ್ರೆಸ್‌ವೇಯನ್ನು ತಲುಪಿದ್ದಾಗ ಡೆಹ್ರಾಡೂನ್ ಕಡೆಯಿಂದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಅದರ ಮೇಲೆ ಉರುಳಿ ಬಿದ್ದಿದೆ.

ಕಾರು ಇದ್ದಕ್ಕಿದ್ದಂತೆ ಲಾರಿಯ ಮುಂದೆ ಬಂದಿದೆ. ಈ ವೇಳೆ ಲಾರಿ ಚಾಲಕ ಬ್ರೇಕ್ ಹಾಕಿದ್ದಾನೆ. ಅತಿ ವೇಗದಲ್ಲಿ ಇದ್ದಿದ್ದರಿಂದ ಆತನಿಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ.

Related Posts

Leave a Reply

Your email address will not be published. Required fields are marked *