ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ವೇದಿಕೆ ಯಲ್ಲಿ ನೋಂದಣಿಗೆ ವ್ಯವಸ್ಥೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಈ ಮೂಲಕ ಸಚಿವೆ ಬಜೆಟ್‌ನಲ್ಲಿ ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರಿಗೆ ಆರ್ಥಿಕ ಬಲ ತುಂಬುವ ಕ್ರಮಕ್ಕೆ ಮುಂದಾಗಿದ್ದಾರೆ. ಓಲಾ ಮತ್ತು ಸ್ವಿಗ್ಗಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರಿಗೆ I-Card ನೀಡಿ e-shram ಪೋರ್ಟಲ್‌ನಲ್ಲಿ ಹೆಸರು ಗಳನ್ನು ನೋಂದಾಯಿಸಲಾಗುವುದು. ಈ ಯೋಜನೆಯಲ್ಲಿ 1 ಕೋಟಿ ಗಿಗ್ ಕಾರ್ಮಿಕರಿಗೆ ಅನುಕೂಲ ಆಗಲಿದೆ.
ನಗರ ಪ್ರದೇಶದ ಬಡ ಮತ್ತು ವಂಚಿತ ಗುಂಪುಗಳ ಆದಾಯ, ಸುಸ್ಥಿರ ಜೀವನೋಪಾಯ ಮತ್ತು ಉತ್ತಮ ಜೀವನವನ್ನು ಹೆಚ್ಚಿಸಲು ನಗರ ಕಾರ್ಮಿಕರ ಉನ್ನತಿಗಾಗಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.