Menu

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದು, ಬರಹ ಕಡ್ಡಾಯ

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲನಾ ಪರವಾನಗಿ ಹೊಂದಿರಬೇಕಾದರೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದು ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲುವುದಾಗಿ ಸರ್ಕಾರ ಹೇಳಿದೆ.

ಯೋಜನೆಯನ್ನು ಮೀರಾ ಭಯಂದರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಮೀರಾ ಭಯಂದರ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉತ್ತರ ಪ್ರದೇಶ, ಬಿಹಾರ, ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಬಂದ ಚಾಲಕರು ಆಟೋ-ಟ್ಯಾಕ್ಸಿ ಓಡಿಸುತ್ತಿದ್ದಾರೆ. ಅವರಿಗೆ ಮರಾಠಿ ಸರಿಯಾಗಿ ಬಾರದ ಕಾರಣ ಪ್ರಯಾಣಿಕರೊಂದಿಗೆ ವಾಗ್ವಾದ ಪ್ರಕರಣಗಳು ಹೆಚ್ಚಾಗಿವೆ.

ಈ ಹೊಸ ಯೋಜನೆಯಡಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ದಾಖಲೆಗಳನ್ನು ಪರಿಶೀಲಿಸಿ, ಮರಾಠಿ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಚಾಲಕರು ಮರಾಠಿ ಭಾಷೆಯಲ್ಲಿ ಸಣ್ಣ ಪ್ಯಾರಾಗ್ರಾಫ್‌ಗಳನ್ನು ಬರೆಯಬೇಕಾಗುತ್ತದೆ. ಮರಾಠಿಯಲ್ಲಿ ನೀಡಲಾದ ಸೂಚನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಮತ್ತು ಸಂಭಾಷಣೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು. ಅನುತ್ತೀರ್ಣರಾದ ಚಾಲಕರಿಗೆ ಮೂರು ತಿಂಗಳ ಅವಧಿ ನೀಡಲಾಗುತ್ತದೆ. ಭಾಷಾ ತರಬೇತಿ ಪಡೆದು ಮತ್ತೆ ಪರೀಕ್ಷೆ ಬರೆಯಬಹುದು. ಎರಡನೇ ಪ್ರಯತ್ನದಲ್ಲೂ ವಿಫಲರಾದರೆ ಅವರ ಪರವಾನಗಿ ರದ್ದಾಗಲಿದೆ.

Related Posts

Leave a Reply

Your email address will not be published. Required fields are marked *