Menu

ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಆರ್ಥಿಕ ನಷ್ಟ: ಡಿಕೆ ಸುರೇಶ್‌

“ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟನ್ನು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆಗಳು ಉತ್ತರದ ರಾಜ್ಯಗಳಿಗೆ ಹಂಚಿಕೆಯಾಗಲಿದೆ” ಎಂದು ಬಮೂಲ್‌ ಅಧ್ಯಕ್ಷ ಡಿಕೆ ಸುರೇಶ್‌ ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್  ಪ್ರತಿಕ್ರಿಯಿಸಿದರು. ಲೋಕಸಭಾ, ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಿಂದ ಕ್ಷೇತ್ರಗಳು ನಷ್ಟವಾಗುವುದಿಲ್ಲ ಎನ್ನುವ ಪ್ರಧಾನಿಯವರ ಹೇಳಿಕೆಯ ಬಗ್ಗೆ ಕೇಳಿದಾಗ, “ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ.

ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಬಹುಮತ ನೀಡಿಲ್ಲ: ಮುಖ್ಯಮಂತ್ರಿ

ಬಿಜೆಪಿ ರಾಜ್ಯದಲ್ಲಿ ಒಂಬತ್ತು ವರ್ಷ ಅಧಿಕಾರ ನಡೆಸಿದ್ದರೂ ಒಮ್ಮೆಯೂ ಜನಾಭಿಪ್ರಾಯ ಪಡೆದು ಅಧಿಕಾರಕ್ಕೆ ಬರಲಿಲ್ಲ. ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಪೂರ್ಣ ಬಹುಮತ ಕೊಟ್ಟಿಲ್ಲ. ಎಂಟು ಜನ‌ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಬಳಿಕ ಚುನಾವಣೆಯಲ್ಲೂ 25-30 ಕೋಟಿ

ದೇವೇಗೌಡರು, ಕುಮಾರಸ್ವಾಮಿ, ಚಲವಾದಿ  ಬಿಜೆಪಿ-ಮೋದಿ ಬಗ್ಗೆ ಎಂಥ ಮಾತುಗಳಾಡಿದ್ದರು: ಸಿದ್ದರಾಮಯ್ಯ

ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಚಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ-RSS-ಮೋದಿಯವರ ಬಗ್ಗೆ ಎಂತೆಂಥಾ ಮಾತಾಡಿದ್ದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರಿಗೆ ಪ್ರಶ್ನಿಸಿದರು. ದಾವಣಗೆರೆಯಲ್ಲಿ ಮಾಧ್ಯಮದವರ ಪ್ರಶ್ನಗಳಿಗೆ ಪ್ರತಿಕ್ರಿಯಿಸಿ, ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿರುವ ಇವರೆಲ್ಲಾ ಮೊದಲೆಲ್ಲಾ ಬಿಜೆಪಿ, RSS, ಮೋದಿಯವರ

ಭಾರತದಿಂದ ಇಸ್ರೇಲ್‌ಗೆ ಏರ್‌ ಇಂಡಿಯಾ ವಿಮಾನ ಮೇ 31 ರವರೆಗೆ ರದ್ದು

ಇರಾನ್‌- ಇಸ್ರೇಲ್‌ ಸಂಘರ್ಷದ ಭಾಗವಾಗಿ ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿರುವ ಕಾರಣ ಏರ್ ಇಂಡಿಯಾ ಮೇ 31 ರವರೆಗೆ ಇಸ್ರೇಲ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಿದೆ. ನವದೆಹಲಿ-ಟೆಲ್ ಅವೀವ್ ಮಾರ್ಗದಲ್ಲಿ ಮೇ 31 ರವರೆಗೆ ವಿಮಾನಯಾನವನ್ನು ಏರ್ ಲೈನ್ಸ್ ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನಕಳವು ಪ್ರಕರಣ ಏನಾಯ್ತು: ಡಿಕೆ ಶಿವಕುಮಾರ್‌

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಚಿನ್ನದ ಕಳವು ಪ್ರಕರಣ ಏನಾಯ್ತು? ಕರ್ನಾಟಕದಲ್ಲಿ ಒಬ್ಬ ಅಧಿಕಾರಿ ಒಂದು ನಿಗಮದಲ್ಲಿ ಸ್ವಲ್ಪ ಕೋಟಿ ಹಣವನ್ನು ವರ್ಗಾವಣೆ ಮಾಡಿದ ಕಾರಣಕ್ಕೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಿದವು. ಈ ಪ್ರಕರಣದಲ್ಲಿ ನಮ್ಮ ಸರ್ಕಾರ ರಚಿಸಿದ ವಿಶೇಷ

ಇಸ್ರೇಲ್‌ನ 15 ಕ್ಕೂ ಹೆಚ್ಚು ಕಡೆ ಇರಾನ್‌ ದಾಳಿ

ಉತ್ತರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಹೈಫಾ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ. ಅಮೆರಿಕ-ಇಸ್ರೇಲ್‌ ನಡೆಸಿದ ದಾಳಿಗಳಲ್ಲಿ ತನ್ನ 34 ಪ್ರಜೆಗಳನ್ನು ಕಳೆದುಕೊಂಡಿದ್ದಕ್ಕೆ ಇರಾನ್‌ ಈ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಹೈಫಾದಲ್ಲಿ ಬಹುಮಹಡಿ

ಹರ್ಮುಜ್‌ ತೆರೆಯುವಂತೆ ಟ್ರಂಪ್‌ ಬೆದರಿಕೆ: ನಷ್ಟ ತುಂಬಿ ಕೊಡಿ ಎಂದ ಇರಾನ್‌

ಇಸ್ರೇಲ್‌- ಅಮೆರಿಕ ಮಾಡಿರುವ ದಾಳಿಗಳಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ಹರ್ಮುಜ್‌ ಜಲಸಂಧಿ ತೆರೆಯುವ ಮಾತೇ ಇಲ್ಲ ಎಂದು ಇರಾನ್ ಹೊಸ  ಷರತ್ತುಗಳನ್ನು ಅಮೆರಿಕದ ಮುಂದಿಟ್ಟಿದೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ

ಕಾರಜೋಳ, ಚರಂತಿಮಠ ಅಕ್ರಮದ ಜೋಡೆತ್ತು: ತಿಮ್ಮಾಪೂರ

ಬಿಜೆಪಿ ಸಂಸದ ಗೋವಿಂದ ಕಾರಜೋಳ ಹಾಗೂ ಅಭ್ಯರ್ಥಿ ವೀರಣ್ಣ ಚರಂತಿಮಠ ಇಬ್ಬರು ಜೋಡೆತ್ತಿನ ರೀತಿ ಅಕ್ರಮ ಕೆಲಸ ಮಾಡುವ ಮೂಲಕ ಬಾಗಲಕೋಟೆ ಅಭಿವೃದ್ಧಿಗೆ ಮಾರಕವಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಆರೋಪಿಸಿದರು. ಬಾಗಲಕೋಟೆಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ

ಇರಾನ್‌-ಇಸ್ರೇಲ್‌ ಸಂಘರ್ಷ: ಔಷಧಿಗಳ ಬೆಲೆ ಏರಿಕೆ ಆತಂಕ

ಇರಾನ್‌-ಇಸ್ರೇಲ್‌ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಉದ್ವಿಗ್ನಗೊಂಡಿದ್ದು, ನಾನಾ ದೇಶಗಳಿಗೆ ಇಂಧನ, ಎಲ್‌ಪಿಜಿ ಪೂರೈಕೆ ವ್ಯತ್ಯಗೊಂಡು ಹಲವು ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಈ ಯುದ್ಧವು ಭಾರತದ ವೈದ್ಯಕೀಯ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಔಷಧಿಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಪೂರೈಕೆಯಲ್ಲಿ

“ಹಿಂದುಳಿದ ವರ್ಗಗಳ ನಾಯಕನೆಂದು  ಹೇಳುತ್ತ ತಿರುಗುವ ಸಿದ್ದರಾಮಯ್ಯರಿಂದ ನಿಗಮಗಳ ಅನುದಾನಗಳಿಗೆ ಕತ್ತರಿ”

ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ಜಾತಿಗಳ ನಿಗಮಗಳಿಗೆ ಅನುದಾನ ಕಡಿತ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆಯ ಸಮಯದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತ ಮುಖಂಡರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ  ಕಿಡಿ