Saturday, October 18, 2025
Menu

ಪಕ್ಷ ನಿಷ್ಠೆಗೆ ಫಲ ಸಿಗಲಿದೆ, ಕಾಯಿರಿ: ಡಿಕೆ ಶಿವಕುಮಾರ್ ಗೆ ಖರ್ಗೆ ಅಭಯ

dk shivakumar

ಪಕ್ಷ‌ ನಿಷ್ಠೆ ಹೈಕಮಾಂಡ್ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ. ಸೂಕ್ತ ಸಮಯದವರೆಗೆ ತಾಳ್ಮೆಯಿಂದ ಇರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ.  ಪವರ್ ಶೇರಿಂಗ್, ಸಂಪುಟ ಪುನಾರಚನೆ ಸೇರಿ ಹಲವಾರು ಮಾತುಗಳು ಕೇಳಿ ಬರುತ್ತಿರುವ ನಡುವೆ ಶುಕ್ರವಾರ ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್‌ ಬೆಂಗಳೂರಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ಈ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ಸುಮಾರು 1 ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಮಲ್ಲಿಕಾರ್ಜುನ ಖರ್ಗೆ, ಅಭಯ ನೀಡಿದ್ದಾರೆಂದು ತಿಳಿದುಬಂದಿದೆ.

ಪಕ್ಷ‌ ನಿಷ್ಠೆ ಹೈಕಮಾಂಡ್ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ. ಸೂಕ್ತ ಸಮಯದವರೆಗೆ ತಾಳ್ಮೆಯಿಂದ ಇರಿ ಎಂದು ಸಹಲಗೆ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಹೈಕಮಾಂಡ್‌ ರಾಜ್ಯದ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಬಿಹಾರ ಚುನಾವಣೆ ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಎಲ್ಲಾ ವಿಚಾರದ ಬಗ್ಗೆ ಒಂದು ಕ್ಲ್ಯಾರಿಟಿಗೆ ಬರೋಣ. ನಿಮ್ಮ ಪಕ್ಷ‌ ನಿಷ್ಠೆ ಹೈಕಮಾಂಡ್ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ. ಸೂಕ್ತ ಸಮಯದವರೆಗೆ ತಾಳ್ಮೆಯಿಂದ ಇರಿ. ಹೈಕಮಾಂಡ್ ಮನಸ್ಸಿನಲ್ಲೂ ಒಂದಷ್ಟು ವಿಚಾರಗಳಿವೆ ಎಲ್ಲವೂ ಬಿಹಾರ ಚುನಾವಣೆ ಬಳಿಕ ಮಾತನಾಡೋಣ ಎಂದು ಖರ್ಗೆ ಅವರು ಅಭಯ ನೀಡಿದ್ದಾರೆ.

ಬಿಹಾರ ವಿಧಾನಸಭಾ ಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಧಾನ ಸೂತ್ರಕ್ಕೆ ಮುಂದಾಗೋ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರೂ ಒಪ್ಪಿದ ಪಕ್ಷದಲ್ಲಿ ಸಂಪುಟ ಪುನಾರಚನೆ ಮಾಡೋ ಸಾಧ್ಯತೆಗಳಿವೆ. ಸುಮಾರು 17ರಿಂದ 18 ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪ್ರಾದೇಶಿಕ ಸಮಾನತೆ, ಶಾಸಕರ ಹಿರಿತನ, ಜಾತಿ ಲೆಕ್ಕಾಚಾರ, ಸ್ಥಳಿಯ ನಾಯಕತ್ವ ಎಲ್ಲವನ್ನೂ ಪರಿಗಣಿಸಿ ಹಿರಿಯ ಶಾಸಕರಿಗೆ ಆದ್ಯತೆ ಕೊಡೋ ಸಾಧ್ಯತೆಗಳಿವೆ.

Related Posts

Leave a Reply

Your email address will not be published. Required fields are marked *