Featured
ಮನೆಯವರನ್ನು ಹೊರಗಟ್ಟಿ ಬೀಗ ಜಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ, ಮನೆ ತೊರೆಯುವುದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೇ ಸಾಲಗಾರರನ್ನು ಮನೆಯಿಂದ ಹೊರಗಟ್ಟಿ ಬೀಗ ಜಡಿಯುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ ಬಡಾವಣೆಯ ವೃದ್ಧೆ ಉಷಾದೇವಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಗಟ್ಟಿ ಮನೆಗೆ ಬೀಗ ಹಾಕಿದೆ. ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬವನ್ನು ರಾತ್ರಿ ಮನೆಯಿಂದ ಹೊರಗಟ್ಟಲಾಗಿದೆ. ಮೌಲಾಸಾಬ
ಮುಟ್ಟಾದಾಗ ಸ್ನಾನ ಮಾಡುವಂತಿಲ್ಲವೆಂದು ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ
ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಎಂಬ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮದುವೆಯನ್ನೇ ಅಂತ್ಯಗೊಳಿಸಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಮನೆಯ ಈ ನಿಯಮಗಳಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಕೂಡ ತಾಯಿ ಹೇಳಿರುವ
ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ
ಚೆನ್ನೈನ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಯುವತಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿದ್ದರು. ಆಟೋ ಚಾಲಕ ಸೇರಿ ಮೂವರು ಚಾಕು ತೋರಿಸಿ
ಮೈಸೂರಿನ ಹಲವೆಡೆ ಐಟಿ ಅಧಿಕಾರಿಗಳಿಂದ ರೇಡ್
ಸರ್ಕಾರದ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ
ನಟ ಡಾಲಿಗಾಗಿ ಮುಗಿ ಬಿದ್ದ ಅಭಿಮಾನಿಗಳಿಗೆ ಲಾಠಿ ರುಚಿ
ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ನಟ ಡಾಲಿ ಧನಂಜಯ ಆಗಮಿಸಿದ್ದರು. ಈ ವೇಳೆ ಧನಂಜಯ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಡಾಲಿ ಜೊತೆ ಸೆಲ್ಫಿ ಬೇಕು ಎಂದು ಫ್ಯಾನ್ಸ್ ಮುಗಿ ಬಿದ್ದಿದ್ದಾರೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು
ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಾಟ
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ನ ಪೇಪರ್ ಟಿಕೆಟ್ ರೋಲ್ ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಕೆಯಾಗುತ್ತಿದೆ. ಯಲಹಂಕದ ಅಟ್ಟೂರು ಲೇಔಟ್ನ ಎಸ್ಆರ್ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ ತರಕಾರಿ ಹಾಗೂ ಹಣ್ಣಿನ ರೇಟ್
ಶಿಕ್ಷಕರ ನೇಮಕದ ಬದಲು ಶಾಲೆಗಳನ್ನೇ ಮುಚ್ಚಲು ಹೊರಟ ಸರ್ಕಾರದ ವಿರುದ್ಧ ಆಕ್ರೋಶ
ಕರ್ನಾಟಕದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕ ಮಾಡಿಕೊಳ್ಳುವ ಬದಲಿಗೆ ಕಡಿಮೆ ಹಾಜರಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ಮೂಲಕ
ನಿಗಮಗಳಿಗೆ 5,000 ಕೋಟಿ ರೂ. ಅನುದಾನ ನೀಡಿ, ಜನರಿಗೆ ಸಾಲ ಕೊಡಿ: ಆರ್.ಅಶೋಕ
ಕಾಂಗ್ರೆಸ್ ಸರ್ಕಾರದಿಂದಾಗಿ ಕರ್ನಾಟಕ ಸೂತಕದ ಮನೆಯಾಗಿದೆ. ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದರಿಂದ ಜನರು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತಾಗಿ ನಿಗಮಗಳಿಗೆ 5,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ,
ನಾಳೆ ದೆಹಲಿ ವಿಧಾನಸಭಾ ಚುನಾವಣೆ: ಬಿಜೆಪಿ- ಆಪ್ ನೇರ ಹಣಾಹಣಿ
ತೀವ್ರ ಕುತೂಹಲ ಕೆರಳಿಸಿರುವ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದ್ದು, ಆಡಳಿತಾರೂಢ ಆಮ್ ಆದ್ಮಿ ಹಾಗೂ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸತತ
ಅರ್ಹ ಭಾರತೀಯರಿಗೆ ಸರ್ಕಾರಿ ಸೌಲಭ್ಯ: ಪ್ರಧಾನಿ ಮೋದಿ
10 ಕೋಟಿ ನಕಲಿ ಮತದಾರರನ್ನು ಹೊರಹಾಕಲಾಗಿದ್ದು, ಅರ್ಹ ಭಾರತೀಯರಿಗೆ ನೇರವಾಗಿ ಸರ್ಕಾರಿ ಸೌಲಭ್ಯಗಳು ತಲುಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭಾಷಣದ ಮೇಲೆ ಅಭಿನಂದನಾ ಭಾಷಣ ಮಾಡಿದ ಅವರು, ದೇಶದಲ್ಲಿ 10 ಕೋಟಿ ನಕಲಿ ಮತದಾರರನ್ನು ಪಟ್ಟಿಯಿಂದ




