Menu

100ಕ್ಕೂ ಅಧಿಕ ಟ್ರ್ಯಾಕ್ಟರ್ ಟ್ರ್ಯಾಲಿಗೆ ಬೆಂಕಿ ಹಚ್ಚಿ ಕಬ್ಬು ಬೆಳೆಗಾರರ ಆಕ್ರೋಶ

ಬಾಗಲಕೋಟೆ: ಕಬ್ಬಿಗೆ 3500 ರೂ.ದರ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಬಾಗಲಕೋಟೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಗುರುವಾರ ಹಿಂಸಾರೂಪ ಪಡೆದಿದ್ದು, 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರ್ಯಾಲಿಗಳು ಬೆಂಕಿಗೆ ಆಹುತಿಯಾಗಿವೆ. ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಬ್ಬಿಗೆ 3,300 ರೂ. ದರ ನಿಗದಿ ಮಾಡಲಾಗಿತ್ತು. ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಪ್ರತಿಭಟನೆ ವಾಪಸ್ ಪಡೆದರೂ ಮುಧೋಳದಲ್ಲಿ ರೈತರು ಕನಿಷ್ಠ 3500 ರೂ.

ಕಸ ಗುಡಿಸುವ ಯಂತ್ರಗಳ ಬಾಡಿಗೆಗೆ 613 ಕೋಟಿ ರೂ.: ಸಚಿವ ಸಂಪುಟ ನಿರ್ಧಾರ

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಸ್ತೆಗಳ ಕಸ ಗುಡಿಸಲು 46 ಕಸ ಗುಡಿಸುವ ಯಂತ್ರಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆಗಳ ಕಸ ಗುಡಿಸಲು ಕಸ

ನವೆಂಬರ್ 15ರಿಂದ ಡಾನ್ಸ್ ಕರ್ನಾಟಕ ಡಾನ್ಸ್ ಪುನರಾರಂಭ

ಬೆಂಗಳೂರು: ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಜೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್‌ನೊಂದಿಗೆ

ಬಿಎಸ್ ಯಡಿಯೂರಪ್ಪಗೆ ಸಂಕಷ್ಟ: ಪೋಕ್ಸೊ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣ ಕಾಯ್ದೆ) ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ನನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ

ಚೀಟಿ ವ್ಯವಹಾರದಲ್ಲಿ ನಷ್ಟ: ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಆಪ್ತ ಆತ್ಮಹತ್ಯೆ

ಚೀಟಿ ಹಣ ಕಟ್ಟದೇ ಮೋಸ ಮಾಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತ  ವೀಡಿಯೋ ಮಾಡಿ ತಮ್ಮ ಟೂರ್ಸ್ ಅಂಡ್ ಟ್ರಾವೆಲ್ಸ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್‌ ಮಾಜಿ ಡಿಸಿಎಂ

ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ ನೆಲಮಂಗಲದಲ್ಲಿ ಜಪ್ತಿ, ಆರೋಪಿಗಳು ಅರೆಸ್ಟ್‌

ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. 50 ಲಕ್ಷ ರೂ. ಬೆಲೆಬಾಳುವ ಇ-ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದ್ದು, 3 ಕಾರು ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚು

ಚಿತ್ತಾಪುರದಲ್ಲಿ ನ.16ರಂದು ಆರ್ ಎಸ್ ಎಸ್ ಪಥಸಂಚಲನಕ್ಕೆ ಷರತುಬದ್ಧ ಅನುಮತಿ

ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ ಎಸ್ ಎಸ್ ಗೆ ಕಲಬುರಗಿ ಜಿಲ್ಲಾಡಳಿತ ಷರತುಬದ್ಧ ಅನುಮತಿ ನೀಡಿದೆ. ಕಲಬುರಗಿ ಹೈಕೋರ್ಟ್ ನ್ಯಾಯಾಲಯದ ಮುಂದೆ ಗುರುವಾರ ರಾಜ್ಯ ಸರ್ಕಾರ ಹಲವು ಸುತ್ತಿನ ಶಾಂತಿ ಸಂಧಾನ ಮಾತುಕತೆ ನಂತರ ಒಂದು ಬಾರಿಯ ಅವಕಾಶವಾಗಿ ಆರ್ ಎಸ್

ಔತಣಕೂಟದಲ್ಲಿ ತಿನ್ನುತ್ತಿದ್ದಾಗ ಮಾಂಸ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ತೆಲಂಗಾಣದ ನಾಗರ್ಕುರ್ನೂಲ್ ಜಿಲ್ಲೆಯ ಬೊಂಡಲಪಲ್ಲಿ ಗ್ರಾಮದಲ್ಲಿ ಕುರಿಮಾಂಸದ ಕರಿ ತಿನ್ನುವಾಗ ಗಂಟಲಲ್ಲಿ ಮಾಂಸದ ತುಂಡು ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಒಬ್ಬರು ಹೊಸ ಮನೆ ಕಟ್ಟಿದ್ದು, ಆ ಸಂತೋಷಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಶ್ರಮಿಸಿದ ಕೆಲಸಗಾರರು

ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ: ಡಿ.6ಕ್ಕೆ ದೇಶದ ಹಲವೆಡೆ ಬಾಂಬ್‌ ಸ್ಫೋಟ ಸಂಚು

ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಡಿಸೆಂಬರ್ 6 ರಂದು ದೆಹಲಿಯ 6 ಕಡೆ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ವಿಚಾರ ಬಯಲಾಗಿದೆ. ದೆಹಲಿ ಕೆಂಪುಕೋಟೆ ಬಳಿ ಕಾರು ಬಾಂಬ್‌ ಸ್ಫೋಟ

32 ಕಾರುಗಳ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು: ವರದಿ

ನವದೆಹಲಿ: ಕೆಂಪುಕೋಟೆಯಲ್ಲಿ ಕಾರು ಸ್ಫೋಟ ಪ್ರಕರಣದ ಉಗ್ರರು 32 ಕಾರುಗಳನ್ನು ಸ್ಫೋಟಗೊಳಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸೇಡು ತೀರಿಸಿಕೊಳ್ಳಲು 16ನೇ ವರ್ಷಾಚರಣೆ ದಿನ ಸರಣಿ ಕಾರು ಸ್ಫೋಟ