Menu

ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ವ್ಯಕ್ತಿ ಮೇಲೆ ದೌರ್ಜನ್ಯ: ಸರಗೂರು ಪೊಲೀಸ್‌ ವಿರುದ್ಧ ದೂರು

ಮೈಸೂರಿನ ಮೇಟಗಳ್ಳಿಯಲ್ಲಿ ಸರಗೂರು ಪೊಲೀಸ್ ಪೇದೆಗಳು ಹಣ ಸೆಟ್ಲಮೆಂಟ್‌ ಡೀಲ್‌ನಲ್ಲಿ ತೊಡಗಿದ್ದು, ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ದೌರ್ಜನ್ಯ ನಡೆಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಸರಗೂರು ಪೊಲೀಸ್ ಠಾಣೆ ಪೇದೆಗಳಾದ ಕೃಷ್ಣಯ್ಯ, ಸುನೀಲ್ ಎಂಬವರು ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಗಿರುವ ಕೆಂಪರಾಜು ಎಂಬವರ ಮನೆಗೆ ನುಗ್ಗಿ ಅವರನ್ನು ರಸ್ತೆಗೆ ಎಳೆತಂದು ಗಲಾಟೆ ನಡೆಸಿದ್ದಾರೆ ಎಂದು ದೂರಲಾಗಿದೆ. ಕೆಂಪರಾಜು ಮನೆಯಲ್ಲಿ ಹೆಂಡತಿ ಮಕ್ಕಳು ಚೀರಾಡುತ್ತಿದ್ದರೂ ಬಿಡದೆ ರಸೆಯಲ್ಲಿ

ಹುಣಸೂರಿನಲ್ಲಿ ವಿದ್ಯುತ್‌ ತಂತಿ ತಗುಲಿ ತಾಯಿ, ಮಗ ಸಾವು

ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ನೀಲಮ್ಮ (39) ಮತ್ತು ಹರೀಶ್ (19) ಮೃತ ದುರ್ದೈವಿಗಳು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ನೀಲಮ್ಮ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿಕೊಂಡು ಒದ್ದಾಡುತ್ತಿರುವಾಗ ರಕ್ಷಿಸಲು ಹೋದ ಮಗ ಕೂಡ

ಧಾರವಾಡ ಜಿಲ್ಲೆ ಜನತಾದರ್ಶನ: ಈವರೆಗೆ ಮೂರು ಸಾವಿರ ಅರ್ಜಿ ವಿಲೇವಾರಿ ಎಂದ ಸಚಿವ ಲಾಡ್‌

ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಜನತಾ ದರ್ಶನವನ್ನು ಆಯೋಜನೆ ಮಾಡಲಾಗುತ್ತಿದ್ದು, ಈವರೆಗೆ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 17 ಜನತಾ ದರ್ಶನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇದು 18ನೇ ಜನತಾ ದರ್ಶನ ಕಾರ್ಯಕ್ರಮವಾಗಿದೆ. ಜನರ

ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಕ್ಷೇತ್ರದ ಜನರಿಗೆ ತೇಜಸ್ವಿ ಸೂರ್ಯ ಕರೆ ನೀಡಲಿ

ಸಂಸದ  ತೇಜಸ್ವಿ ಸೂರ್ಯರು ತಮ್ಮ ಕ್ಷೇತ್ರದ ಜನರಿಗೆ, ನೀವು ನಿಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡಿ ಕರೆ ನೀಡಲಿ. ಆಗ ಯಾರು ಪಾಲನೆ ಮಾಡುತ್ತಾರೆ ನೋಡೋಣ. ಕಾರಿಲ್ಲದ ಹುಡುಗನ ಮನೆಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ

ಯಾವುದೇ ಕಾರಣಕ್ಕೂ ಪೊಲೀಸರು ರಾಜಕೀಯ ಹಿಂಬಾಲಕರಾಗಬೇಡಿ: ಡಿಕೆ ಶಿವಕುಮಾರ್‌

“ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮ ವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ

ಅಲ್ ಖೈದಾ ಸಂಪರ್ಕ ಆರೋಪ: ಪುಣೆಯಲ್ಲಿ ಟೆಕ್ಕಿ ಅರೆಸ್ಟ್‌

ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪುಣೆಯ ಕೊಂಧ್ವಾದಲ್ಲಿ ಟೆಕ್ಕಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಜುಬೈರ್ ಹಂಗರ್ಗೇಕರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. 

ಹಿಟ್‌ ಅಂಡ್‌ ರನ್‌: ದೊಡ್ಡಬಳ್ಳಾಪುರದಲ್ಲಿ ಯುವಕರಿಬ್ಬರು ಬಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಹಿಟ್​ ಅಂಡ್‌ ರನ್‌ಗೆ ಬೈಕ್​ ಸವಾರರಿಬ್ಬರು ಬಲಿಯಾಗಿದ್ದಾರೆ.  ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ತೂಬಗೆರೆ ನಿವಾಸಿ ನಂದನ್ ಕುಮಾರ್(22) ಮತ್ತು ದೊಡ್ಡತಿಮ್ಮನಹಳ್ಳಿಯ ರವಿಕುಮಾರ್(24) ಮೃತ ಯುವಕರು.

ಆರೆಸ್ಸೆಸ್‌ ಚಟುವಟಿಕೆ ನಿರ್ಬಂಧ: ಹೈಕೋರ್ಟ್‌ ತಡೆಯಾಜ್ಞೆ. ಸರ್ಕಾರಕ್ಕೆ ನೋಟಿಸ್‌

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಆರ್​ಎಸ್​ಎಸ್ ಚಟುವಟಿಕೆಗಳು ಹಾಗೂ ಪಥಸಂಚಲನ ನಿರ್ಬಂಧಿಸಿ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್​ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು

ಡ್ರಗ್ಸ್ ಮುಕ್ತ ಕರ್ನಾಟಕ ಸಾಧಿಸಿ ತೋರಿಸಿ: ಪೊಲೀಸ್‌ಗೆ ಸಿಎಂ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ. ಡ್ರಗ್ ಮಾರುವವರು, ತರುವವರು, ಎಲ್ಲಿಂದ ಡ್ರಗ್ಸ್ ಬರುತ್ತದೆ, ಈ ಜಾಲದ ಏಜೆಂಟರು ಯಾರ್ಯಾರು ಎನ್ನುವುದೂ ನಿಮಗೇ ಗೊತ್ತಿರುತ್ತದೆ.

ಆಂಧ್ರದತ್ತ ಚಂಡಮಾರುತ: ಕರಾವಳಿ ನಿವಾಸಿಗಳ ಸ್ಥಳಾಂತರ, ರೆಡ್‌ ಅಲರ್ಟ್‌

ಆಂಧ್ರಪ್ರದೇಶದ ಕರಾವಳಿಯತ್ತ ಮೊಂಥಾ ಚಂಡಮಾರುತವು ವೇಗವಾಗಿ ಸಾಗುತ್ತಿದ್ದು, ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಭೂಮಿಯನ್ನು ಸ್ಪರ್ಶಿಸುವ ಸಾಧ್ಯತೆಯಿದ್ದು, ರೆಡ್‌ ಅಲರ್ಟ್‌ ಜಾರಿ ಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರಾವಳಿ ಪ್ರದೇಶಗಳ