Menu

ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಮತ್ತು ಮುಸ್ಲಿಂ ತುಷ್ಟೀಕರಣ: ಕೆಎನ್‌ ರಾಜಣ್ಣ ಸತ್ಯ ಹೇಳಿದ್ದಾರೆಂದ ಆರ್‌ ಅಶೋಕ

@RahulGandhi ಅವರ “ಮತಗಳ್ಳತನ”ದ ನಾಟಕ, ಸುಳ್ಳನ್ನು ಬಯಲು ಮಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣನವರು ಅವರು ಈಗ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಂ ತುಷ್ಟೀಕರಣದ ಬಗ್ಗೆ ಮತ್ತೊಮ್ಮೆ ಸತ್ಯವನ್ನು ನುಡಿದಿದ್ದಾರೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಓಟು ಹಾಕುತ್ತಾರೆ,  ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಾರೆಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಓಟು ಹಾಕೋದಿಲ್ಲ.  ಮುಸ್ಲಿಮರಿಗೆ ಬೇರೆ ಆಯ್ಕೆ ಇಲ್ಲ,

ಬಿಗ್‌ ಬಾಸ್‌: ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಪೊಲೀಸ್‌ ನೋಟಿಸ್‌

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಮತ್ತೊಬ್ಬರು ಸ್ಪರ್ಧಿ ರಕ್ಷಿತಾ ಅವರನ್ನು ಕುರಿತು ‘ಎಸ್ ಕ್ಯಾಟಗರಿ’ ಎಂಬ ಪದವನ್ನು ಬಳಸಿದ್ದಕ್ಕಾಗಿ ಅಶ್ವಿನಿ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದಾರೆ.‌ ಅಶ್ವಿನಿ ಈ ಪದ ಬಳಸಿರುವುದನ್ನು ಖಂಡಿಸಿ ವಕೀಲರೊಬ್ಬರು ಬಿಡದಿ

ಆನ್‌ಲೈನ್‌ ಬೆಟ್ಟಿಂಗ್‌: ಮನೆಯಲ್ಲಿದ್ದ ಚಿನ್ನಾಭರಣ ಕಳವುಗೈದ ದತ್ತು ಮಗಳು

ಬೆಂಗಳೂರಿನ ಜೆಪಿ ನಗರದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದಿರುವ ಯುವತಿಯು ಮಗಳಂತೆ ಸಾಕಿದ ದತ್ತು ತಾಯಿಯ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಕಳವು ಮಾಡಿರುವ ಪ್ರಕರಣ ನಡೆದಿದೆ. 15 ವರ್ಷಗಳಿಂದ ಮನೆ ಮಾಲೀಕರ ಮಗಳಾಗಿ ಬೆಳೆದ ಯುವತಿ ಮಂಗಳ ಆನ್‌ಲೈನ್ ಬೆಟ್ಟಿಂಗ್ ಚಟದ

ಅಮೆರಿಕ ನಿರ್ಬಂಧ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ ಭಾರತ

ಅಮೆರಿಕ ಸುಂಕ ಏರಿಕೆ ಕ್ರಮದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಆರಂಭಿಸಿತ್ತು, ಇದೀಗ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿವೆ.

ರೇಣುಕಾಸ್ವಾಮಿ ರೀತಿ ಕೊಲೆ ಆಗ್ತಿಯಾ: ಸ್ನೇಹಿತನ ಚಂದ್ರಾಲೇಔಟ್‌ ಗೋದಾಮಿಗೆ ಕರೆಸಿ ಧಮ್ಕಿ

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಗೋದಾಮಿಗೆ ಕರೆಸಿಕೊಂಡ ವ್ಯಕ್ತಿ ರೇಣುಕಾಸ್ವಾಮಿಯನ್ನು ಸಾಯಿಸದಂತೆ ನಿನ್ನ ಸಾಯಿಸುವುದಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿ ನಡೆದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಇದೇ ಮಾದರಿಯಲ್ಲಿ ಸಾಯಿಸುತ್ತೇನೆ

ಸುರಕ್ಷತಾ ಕ್ರಮಗಳ ಲೋಪ: ಆರ್​ಟಿಒ ಅಧಿಕಾರಿಗಳಿಂದ 41 ಬಸ್‌ ಸೀಜ್‌

ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಲೋಪಗಳ ಹಿನ್ನೆಲೆ ಆರ್​ಟಿಒ ಅಧಿಕಾರಿಗಳು ದೇವನಹಳ್ಳಿಯ ಏರ್​ಪೋರ್ಟ್ ಟೋಲ್ ಬಳಿ ಕಾರ್ಯಾಚರಣೆ ನಡೆಸಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ 40ಕ್ಕೂ ಹೆಚ್ಚು ಬಸ್‌ಗಳನ್ನು ಸೀಜ್ ಮಾಡಿದ್ದಾರೆ. ನೇಪಾಳದಿಂದ ಜನರನ್ನು

ನವೆಂಬರ್‌ನಲ್ಲಿ ನಡೆಯಲಿದೆ ಬಿಜೆಪಿಯೊಳಗೆ ಕ್ರಾಂತಿ: ಭೈರತಿ ಸುರೇಶ್‌

ನವೆಂಬರ್ ತಿಂಗಳಿನಲ್ಲಿ ಕ್ರಾಂತಿ ಆಗುವುದು ಕಾಂಗ್ರೆಸ್‌ನಲ್ಲಿ ಅಲ್ಲ, ಬಿಜೆಪಿಯಲ್ಲಿ ಕ್ರಾಂತಿ ಆಗಲಿದೆ. ಹೀಗಾಗಿ ಅವರು ಆ ವಿಚಾರವನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ. ಕೋಲಾರ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಚರ್ಚಿಸಲು ವಿಷಯವಿಲ್ಲ.

ಒಳ ಮೀಸಲು: ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆ ಜಾರಿಗೆ ಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಅನುಷ್ಠಾನದ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ  ಸಭೆಯಲ್ಲಿ ಚರ್ಚಿಸಲಾಯಿತು. ಒಳ ಮೀಸಲುಲಾತಿ ಕುರಿತು  ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.   ಒಳ ಮೀಸಲಾತಿ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಸಿಎಂ ಲೇವಡಿ

“ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ” ಎಂದು  ಡಿಸಿಎಂ ಡಿಕೆ ಶಿವಕುಮಾರ್‌ ಲೇವಡಿ ಮಾಡಿದರು. ಬಿಹಾರ ಚುನಾವಣೆಗೆ ಸಿಎಂ, ಡಿಸಿಎಂ 300 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ

ಕಾಂಗ್ರೆಸ್ ಸರ್ಕಾರ ನೌಕರರಿಗೆ ಸಂಬಳ ನೀಡುತ್ತಿಲ್ಲ : ಬಿವೈ ವಿಜಯೇಂದ್ರ

ಗ್ಯಾರಂಟಿ ಯೋಜನೆಯಿಂದ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಎದರಿಸುತ್ತಿದೆ. ತೆಲಂಗಾಣ ಸಿಎಂ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದಿದ್ದಾರೆ, ನಮ್ಮ ರಾಜ್ಯದ ಪರಿಸ್ಥಿತಿ ಏನೂ ಭಿನ್ನವಾಗಿ ಉಳಿದಿಲ್ಲ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗ್ತಿಲ್ಲ ರಾಜ್ಯದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಆತ್ಮಹತ್ಯೆ